ಹೊಸ 10 ರೂ. ಮತ್ತು 500 ರೂ. ನೋಟುಗಳು ಬರ್ತಿದಾವಾ? ಹಳೆ ನೋಟುಗಳ ಕಥೆ ಏನು? RBI ಹೇಳಿದ್ದೇನು?

ಹೊಸ 10 ರೂ. ಮತ್ತು 500 ರೂ. ನೋಟುಗಳು ಮಾರುಕಟ್ಟೆಗೆ ಬರ್ತಾ ಇವೆ. ಆದ್ರೆ ಹೊಸ ನೋಟುಗಳನ್ನು ಯಾಕೆ ಸಡನ್ ಆಗಿ ತರ್ತಾ ಇದ್ದಾರೆ? ಇದರ ಹಿಂದಿನ ಕಾರಣ ಏನು? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ನೋಟುಗಳನ್ನ ಪರಿಚಯಿಸ್ತಾ ಇರೋದಾಗಿ ಹೇಳಿದೆ, ಇದು ಆನ್‌ಲೈನ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

New 10 and 500 Rupee Notes Impact on Old Currency and RBI Clarifications kvn

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಒಂದು ಸರ್ಪ್ರೈಸ್ ಕೊಡ್ತಾ ಇದೆ. ಈಗ ಹೊಸ 10 ರೂ. ಮತ್ತು 500 ರೂ. ಕರೆನ್ಸಿ ನೋಟುಗಳು ಮಾರುಕಟ್ಟೆಗೆ ಬರ್ತಾ ಇವೆ.

New 10 and 500 Rupee Notes Impact on Old Currency and RBI Clarifications kvn

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ನೋಟುಗಳನ್ನ ಪರಿಚಯಿಸ್ತಾ ಇರೋದಾಗಿ ಹೇಳಿದೆ. ಇದು ಇಂಟರ್ನೆಟ್‌ನಲ್ಲಿ ದೊಡ್ಡ ಸುದ್ದಿ ಮಾಡ್ತಾ ಇದೆ. ಆದ್ರೆ ಹೊಸ ನೋಟುಗಳನ್ನು ಯಾಕೆ ಸಡನ್ ಆಗಿ ತರ್ತಾ ಇದ್ದಾರೆ? ಇದರ ಹಿಂದಿನ ಕಾರಣ ಏನು?


ಹಾಗಾದ್ರೆ ಹಳೆ 10 ಮತ್ತು 500 ರೂಪಾಯಿ ನೋಟುಗಳು ಕ್ಯಾನ್ಸಲ್ ಆಗ್ತಿದಾವಾ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ನೋಟುಗಳನ್ನ ಮಹಾತ್ಮ ಗಾಂಧಿ ಸರಣಿಯ ಭಾಗವಾಗಿ ತರಲಿದೆ ಅಂತ ಹೇಳಲಾಗ್ತಿದೆ.

ಹೊಸ ನೋಟುಗಳು ಬಂದ್ರೆ ಹಳೆ 10 ಅಥವಾ 500 ರೂಪಾಯಿ ಕರೆನ್ಸಿ ನೋಟುಗಳು ನಡೆಯಲ್ವಾ ಅಂತ ಈಗ ತುಂಬಾ ಜನರಿಗೆ ಡೌಟ್ ಇದೆ. ಈ ಬಗ್ಗೆ ಆರ್‌ಬಿಐ ಸ್ಪಷ್ಟನೆ ನೀಡಿದೆ.

ಆದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆ ರೀತಿ ಯೋಚಿಸೋಕೆ ಕಾರಣ ಇಲ್ಲ ಅಂತ ಹೇಳಿದೆ. ಹಳೆ ನೋಟುಗಳು ಇನ್ನೂ ನಡೆಯುತ್ತವೆ ಎಂದಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದರ ಅರ್ಥ ನಿಮ್ಮ ಹತ್ರ ಇರೋ ಹಳೆ ನೋಟುಗಳು ಸಂಪೂರ್ಣವಾಗಿ ವ್ಯಾಲಿಡ್ ಆಗಿವೆ, ಮತ್ತು ನೀವು ಅವುಗಳನ್ನ ವ್ಯವಹಾರಗಳಿಗೆ ಬಳಸಬಹುದು.

Latest Videos

vuukle one pixel image
click me!