ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪಡೆಯಲು ಮಹಿಳೆಯರಿಗೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಅನರ್ಹರನ್ನು ಹೊರಹಾಕಲು ಪತಿಯ ಆಧಾರ್ ಲಿಂಕ್, ಸಾಲವಿಲ್ಲದ ಬ್ಯಾಂಕ್ ಖಾತೆ ಮತ್ತು ಮನೆಮನೆ ಸಮೀಕ್ಷೆಯಂತಹ ನಿಯಮಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯಡಿ ಪ್ರತಿ ತಿಂಗಳು ನೀಡಲಾಗುವ 2,000 ರೂ. ಹಣ ಪಡೆಯಲು ಮಹಿಳೆಯರಿಗೆ ಇನ್ಮುಂದೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಯೋಜನೆಯ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಕೇವಲ ಯಜಮಾನಿಯಷ್ಟೇ ಅಲ್ಲದೆ ಪತಿಯ ಆಧಾರ್ ಕಾರ್ಡ್ ಕೂಡ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು
24
ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯುವಂತೆ ಮಾಡಲು ಮತ್ತು ಅನರ್ಹರನ್ನು ಹೊರಹಾಕಲು ಇಲಾಖೆಯು ಮರುಪರಿಶೀಲನಾ ಪ್ರಕ್ರಿಯೆಯನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳನ್ನು ಫಿಲ್ಟರ್ ಮಾಡಲು ಮತ್ತಷ್ಟು ಹೊಸ ರೂಲ್ಸ್‌ಗಳನ್ನು ಜಾರಿಗೆ ತರಲಾಗುತ್ತಿದೆ. ಈ ಹೊಸ ರೂಲ್ಸ್ ಅನ್ವಯ ಲಕ್ಷಾಂತರ ಜನರು ಈ ಯೋಜನೆಯಿಂದ ಹೊರಗೆ ಉಳಿಯುತ್ತಾರೆ.
34
ಹೊಸ ಮಾರ್ಗಸೂಚಿಗಳು ಹಾಗೂ ಪ್ರಮುಖ ನಿಯಮಗಳು:
ಪತಿಯ ಆಧಾರ್ ಲಿಂಕ್ ಕಡ್ಡಾಯ: ಇದುವರೆಗೆ ಮನೆಯ ಯಜಮಾನಿಯ ಆಧಾರ್ ಮಾತ್ರ ಇತ್ತು, ಇನ್ಮುಂದೆ ಪತಿಯ ಆಧಾರ್ ಕಾರ್ಡ್ ವಿವರವನ್ನೂ ನೀಡುವುದು ಕಡ್ಡಾಯವಾಗಿದೆ.
ಸಾಲವಿಲ್ಲದ ಬ್ಯಾಂಕ್ ಖಾತೆ: ಫಲಾನುಭವಿಗಳು ಯಾವುದೇ ಸಾಲದ ಹೊರೆಯಿಲ್ಲದ (Debt-free) ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಹೆಸರು ಮತ್ತು ವಿಳಾಸ ತಾಳೆ: ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಬ್ಯಾಂಕ್ ಖಾತೆ ಹಾಗೂ ಪಡಿತರ ಚೀಟಿಯಲ್ಲಿ ಫಲಾನುಭವಿಯ ಹೆಸರು ಮತ್ತು ವಿಳಾಸ ನಿಖರವಾಗಿರಬೇಕು. ಹೆಸರು ಅಥವಾ ವಿಳಾಸದಲ್ಲಿ ವ್ಯತ್ಯಾಸವಿದ್ದರೆ ಗೃಹಲಕ್ಷ್ಮಿ ಸೌಲಭ್ಯಕ್ಕೆ ತೊಂದರೆಯಾಗಬಹುದು.
ಮನೆಮನೆ ಸಮೀಕ್ಷೆ: ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣ ನಡೆಸಲಾಗುತ್ತದೆ. ಜತೆಗೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಗಣತಿದಾರರನ್ನು ನಿಯೋಜಿಸಲಾಗುತ್ತಿದೆ.
17 ಪ್ರಶ್ನೆಗಳ ಹೊಸ ಅರ್ಜಿ: ಫಲಾನುಭವಿಗಳ ಸಮಗ್ರ ಪರಿಶೀಲನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿಯನ್ನು ಸಿದ್ಧಪಡಿಸಿದೆ.
ಎಸ್‌ಐಆರ್ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಮರುಪರಿಶೀಲನೆಗೆ ಅಧಿಕೃತ ಚಾಲನೆ ಸಿಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.