BSNL ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್. ಖಾಸಗಿ ಕಂಪನಿಗಳ ಪೈಪೋಟಿಯ ನಡುವೆಯೂ ಕಡಿಮೆ ಬೆಲೆಯ ಟಾಪ್ ಅಪ್ ರೀಚಾರ್ಜ್ ಮತ್ತು ಪ್ಲಾನ್‌ಗಳನ್ನು ನೀಡುತ್ತಿದೆ. ಪೈಪೋಟಿ ಕಂಪನಿಗಳು ಬೆಲೆ ಏರಿಸುತ್ತಿದ್ದರೂ BSNL ಬೆಲೆ ಏರಿಸದೆ ಉತ್ತಮ ಸೇವೆ ನೀಡುತ್ತಿದೆ. ₹58 ಡೇಟಾ ವೋಚರ್ ಮತ್ತು ₹59 ಸರ್ವೀಸ್ ವ್ಯಾಲಿಡಿಟಿ ಪ್ಲಾನ್‌ಗಳನ್ನು ಪರಿಚಯಿಸಿದೆ.
BSNL ₹58 ಪ್ರಿಪೇಯ್ಡ್ ಪ್ಲಾನ್
₹58 ಪ್ಲಾನ್‌ನ ಲಾಭ ಪಡೆಯಲು ಬಳಕೆದಾರರು ಆಕ್ಟಿವ್ ಪ್ಲಾನ್ ಹೊಂದಿರಬೇಕು. 7 ದಿನಗಳ ವ್ಯಾಲಿಡಿಟಿ ಮತ್ತು 2GB ದೈನಂದಿನ ಡೇಟಾ ಇದೆ. ದೈನಂದಿನ ಡೇಟಾ ಮುಗಿದ ನಂತರ 40 Kbps ವೇಗದಲ್ಲಿ ಇಂಟರ್ನೆಟ್ ಸಿಗುತ್ತದೆ.
BSNL ₹59 ಪ್ರಿಪೇಯ್ಡ್ ಪ್ಲಾನ್
₹59 ಪ್ಲಾನ್ 7 ದಿನಗಳ ಸರ್ವೀಸ್ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 1GB ಡೇಟಾ ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ನೀಡುತ್ತದೆ. ಆದರೆ ಈ ಪ್ಲಾನ್‌ನಲ್ಲಿ SMS ಸೌಲಭ್ಯವಿಲ್ಲ.
ಕಡಿಮೆ ಹಣದಲ್ಲಿ ಉತ್ತಮ ಸೇವೆ ಬೇಕೆಂದರೆ ಇವು ಒಳ್ಳೆಯ ಪ್ಲಾನ್‌ಗಳು. ಕಡಿಮೆ ಅವಧಿಯಲ್ಲಿ ಹೆಚ್ಚು ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳಿಗೆ ಉಪಯುಕ್ತ. BSNLನಲ್ಲಿ ಇಂತಹ ಅದ್ಭುತ ಆಫರ್‌ಗಳು ₹108, ₹107, ₹198, ₹201 ರಂತಹ ಪ್ಲಾನ್‌ಗಳಲ್ಲಿ ಲಭ್ಯ.
ಖಾಸಗಿ ಕಂಪನಿಗಳ ಬೇಲೆ ಏರಿಕೆಯಿಂದಾಗಿ ಬಿಎಸ್ಎನ್ಎಲ್‌ಗೆ ಬರೋ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ನೆಟ್‌ವರ್ಕ್ ಸಮಸ್ಯೆಯಿಂದ ಬಳಕೆದಾರರು ಬೆಲೆ ಏರಿಕೆಯಾದ್ರೂ ಪರವಾಗಿಲ್ಲ ಎಂದು ನಿರ್ಧರಿಸಿ ಮತ್ತೆ ಹಳೆ ನೆಟ್‌ವರ್ಕ್‌ಗೆ ಪೋರ್ಟ್ ಆಗುತ್ತಿರೋದರ ಬಗ್ಗೆ ವರದಿ ಬಹಿರಂಗವಾಗಿದೆ.