ಅಂತೂ, ಇಂತೂ ಜಲಾಶಯಗಳಿಗೆ ಬಂತು ಜೀವಕಳೆ.. KRS, ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ

Published : Jul 07, 2026, 10:37 AM IST

ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಿಗೆ ಜಲಾಭಿಷೇಕ ಆಗಿದೆ. ಹೊಸ ಜೀವಕಳೆಯೊಂದಿಗೆ ಮೈದುಂಬಿ ನಿಂತಿವೆ. ಕೆಆರ್‍‌ಎಸ್, ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಇಂದಿನ ಸ್ಥಿತಿ ಹೇಗಿದೆ ಅನ್ನೋದ್ರ ವಿವರ ಇಲ್ಲಿದೆ. 

PREV
15
ಜೀವಕಳೆ ತಂದ ಮುಂಗಾರು

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಸುಡುತ್ತಿದ್ದ ಬಿಸಿಲಿಗೆ ಬತ್ತಿ ಹೋಗುತ್ತಿದ್ದ ಜಲಾಶಯಗಳಿಗೆ ಈಗ ಮಳೆರಾಯ ಜೀವಕಳೆ ತಂದಿದ್ದಾನೆ. ನದಿಗಳ ಹರಿವು ಹೆಚ್ಚಾಗಿ ಜಲಾಶಯಗಳು ಭರ್ತಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಾಡಿನ ಅನ್ನದಾತರ ಮೊಗದಲ್ಲಿ ಸಂತೋಷದ ಚಿಲುಮೆ ಮೂಡಿದೆ.

25
ಶಿವಮೊಗ್ಗ: ತುಂಗಾ ಜಲಾಶಯ ಭರ್ತಿ!

ಮಲೆನಾಡಿನಲ್ಲಿ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಶಿವಮೊಗ್ಗದ ತುಂಗಾ ಜಲಾಶಯಕ್ಕೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವನ್ನು ತಲುಪಿದ್ದು, ನದಿಗೆ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ.

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಮಟ್ಟ: 588.24 ಮೀಟರ್ (ಸಂಪೂರ್ಣ ಭರ್ತಿ)
  • ಒಳಹರಿವು: 21,508 ಕ್ಯೂಸೆಕ್
  • ಹೊರಹರಿವು: 19,078 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 2.411 ಟಿಎಂಸಿ
35
ಕೆಆರ್‌ಎಸ್ ಜಲಾಶಯಕ್ಕೆ ಹರಿದುಬಂದ ವರುಣನ ಕೃಪೆ

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕಾವೇರಿ ನದಿಯ ಒಳಹರಿವು ಹೆಚ್ಚಾಗಿದೆ. ಇದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಳೆದ ಎರಡು ದಿನಗಳಲ್ಲಿ ಭರ್ತಿ 2 ಅಡಿಗಳಷ್ಟು ಏರಿಕೆಯಾಗಿದೆ. ಇದು ಮೈಸೂರು ಮತ್ತು ಮಂಡ್ಯ ಭಾಗದ ರೈತರ ಮೊಗದಲ್ಲಿ ನಗು ತಂದಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 82.45 ಅಡಿ (ಎರಡು ದಿನದಲ್ಲಿ 2 ಅಡಿ ಏರಿಕೆ)
  • ಒಳಹರಿವು: 5,734 ಕ್ಯೂಸೆಕ್
  • ಹೊರಹರಿವು: 777 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 11.909 ಟಿಎಂಸಿ
45
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಪ್ರಾರಂಭ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ಈಗ ಹೊಸ ನೀರಿನ ಹರಿವು ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 3 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದ್ದು, ಒಣಗುತ್ತಿದ್ದ ನದಿ ಪಾತ್ರಕ್ಕೆ ಮಳೆರಾಯ ಹೊಸ ಕಳೆ ನೀಡಿದ್ದಾನೆ.

  • ಇಂದಿನ ಮಟ್ಟ: 1587.92 ಅಡಿ
  • ಪ್ರಸ್ತುತ ಒಳಹರಿವು: 2,150 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 9.379 ಟಿಎಂಸಿ

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 77.343 ಟಿಎಂಸಿ ನೀರಿತ್ತು. ಈ ಬಾರಿ ಮಳೆ ತಡವಾಗಿದ್ದರೂ, ಈಗ ಒಳಹರಿವು ಆರಂಭವಾಗಿರುವುದು ಆಶಾದಾಯಕವಾಗಿದೆ.

55
ಕೃಷಿ ಚಟುವಟಿಕೆ ಚುರುಕು

ಒಟ್ಟಾರೆಯಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಎಲ್ಲಾ ಜಲಾಶಯಗಳು ಆದಷ್ಟು ಬೇಗ ಭರ್ತಿಯಾಗಲಿ, ಈ ಬಾರಿ ನಾಡು ಸುಭಿಕ್ಷವಾಗಿರಲಿ ಎನ್ನುವುದು ರಾಜ್ಯದ ರೈತರ ಏಕೈಕ ಪ್ರಾರ್ಥನೆಯಾಗಿದೆ.

Read more Photos on
click me!

Recommended Stories