ಗುಡ್‌ಬೈ 2019: ಈ ವರ್ಷ ವಿವಾದದ ಬಿರುಗಾಳಿ ಎಬ್ಬಿಸಿದ ಆತ್ಮಚರಿತ್ರೆಗಳು

First Published | Dec 29, 2019, 12:47 PM IST

ರಾಜಕಾರಣಿಗಳು, ಕ್ರಿಕೆಟಿಗರು, ಬಾಲಿವುಡ್‌ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಆತ್ಮಕತೆ ಬರೆದಾಗ ಈ ಹಿಂದೆಯೂ ಸಾಕಷ್ಟು ವಿವಾದಗಳಾಗಿದ್ದವು. ವಿಶೇಷ ಎಂದರೆ ಕೆಲವೊಮ್ಮೆ ವಿವಾದಗಳೇ ಪುಸ್ತಕದ ಓದುಗರನ್ನು ಹೆಚ್ಚಿಸಿದ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಕೆಲ ವಿವಾದ ಸೃಷ್ಟಿಸಿದ ಆತ್ಮಚರಿತ್ರೆಗಳು ಇಲ್ಲಿವೆ.

ಪ್ರಸಿದ್ಧ ಬಾಲಿವುಡ್‌ ನಟ ರಿಷಿ ಕಪೂರ್‌ ತಮ್ಮ ಆತ್ಮಚರಿತ್ರೆಯಲ್ಲಿ, ನನ್ನ ತಂದೆಯೊಂದಿಗೆ ನರ್ಗೀಸ್‌ ಜೀ ಸಂಬಂಧ ಹೊಂದಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಹಾಗಾಗಿ ಅದೇನೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಮನೆಯಲ್ಲಿ ನನಗೆಂದೂ ಇರಿಸು ಮುರುಸು ಆಗಿದ್ದಿಲ್ಲ ಎಂದಿದ್ದಾರೆ.
undefined
ನಟ, ನಿರ್ದೇಶಕ, ಬರಹಗಾರ ದೇವ್‌ ಆನಂದ್‌ ಅವರ ಆತ್ಮಚರಿತ್ರೆ ಸಿನಿಮಾ ಕ್ಷೇತ್ರದ ರಸಭರಿತ ಸುದ್ದಿಗಳಿಂದಲೇ ತುಂಬಿದೆ. ಜೀನತ್‌ ಅಮಾನ್‌ ಅವರೊಂದಿಗೆ ಇದ್ದ ಪ್ರೀತಿಯ ಬಗ್ಗೆ ಹೇಳಿದ್ದಾರೆ.
undefined

Latest Videos


2007-08ರಲ್ಲಿ ನಡೆದ ಇಂಡಿಯಾ- ಆಸ್ಪ್ರೇಲಿಯಾ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯವಾದ ಬಳಿಕ ಸಚಿನ್‌ ತೆಂಡೂಲ್ಕರ್‌ ಹಸ್ತಲಾಘವ ಮಾಡುವುದನ್ನು ಮರೆತಿದ್ದರು. ಅದನ್ನು ಉಲ್ಲೇಖಿಸಿ ಆಸ್ಪ್ರೇಲಿಯಾ ಕ್ರಿಕೆಟ್‌ ಕೋಚ್‌ ಮೈಕೆಲ್‌ ಹುಸ್ಸೆ ‘ಅಂತಾರಾಷ್ಟ್ರೀಯ ಪಂದ್ಯಾವಳಿ ಮುಗಿದ ನಂತರ ಶೇಕ್‌ ಹ್ಯಾಂಡ್‌ ಕೊಡುವುದನ್ನು ಮರೆಯಬಾರದು. ಬಹುಶಃ ಸಚಿನ್‌ ಅವರೂ ನಮ್ಮ ನಿಮ್ಮೆಲ್ಲರಂತೆ ಮನುಷ್ಯರು, ಅವರೇನು ದೇವರಲ್ಲ’ ಎಂದು ಹೇಳಿದ್ದರು.
undefined
ವಿಶ್ವಕಪ್‌ ಆಟಕ್ಕೆ ಕೆಲವೇ ದಿನ ಇರುವಾಗ ಆಸ್ಪ್ರೇಲಿಯಾದ ಕ್ರಿಕೆಟಿಗ, ಭಾರತೀಯ ತಂಡದ ಕೋಚ್‌ ಗ್ರೇಗ್‌ ಚಾಪೆಲ್‌ ಸಚಿನ್‌ರನ್ನು ಭೇಟಿ ಮಾಡಿ ರಾಹುಲ್‌ ದ್ರಾವಿಡ್‌ ಅವರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಹಾಗೆ ಮಾಡಿದರೆ ನಾವಿಬ್ಬರೂ ಭಾರತದ ಕ್ರಿಕೆಟ್‌ ಜಗತ್ತನ್ನು ಬಹುಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದಿದ್ದರಂತೆ.
undefined
ಮಧುಬಾಲಾ ಒಬ್ಬ ಉತ್ತಮ ನಟಿ ಹಾಗೂ ಒಳ್ಳೆಯ ವ್ಯಕ್ತಿ. ಆಕೆಯ ಬಗ್ಗೆ ನಾನು ಆಕರ್ಷಿತನಾಗಿದ್ದೆ. ಒಬ್ಬ ಮಹಿಳೆಯಲ್ಲಿ ಏನೇನು ಇರಬೇಕು ಎಂದು ನಾನು ಬಯಸುತ್ತಿದ್ದೆನೋ ಅದರಲ್ಲಿ ಕೆಲವು ಗುಣಗಳು ಮಧುಬಾಲಾಳಲ್ಲಿದ್ದವು’ ಎಂದು ದಿಲೀಪ್‌ ಕುಮಾರ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
undefined
ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಕಾಜಲ್‌ ಜೊತೆಗಿನ ಸಂಬಂಧದ ಬಗ್ಗೆ ಬರೆದಿದ್ದರು. ಅದರಲ್ಲಿ ‘ಇಪ್ಪತ್ತೈದು ವರ್ಷಗಳಿಂದ ನಾನು ಕಾಜಲ್‌ ಬಗ್ಗೆ ಹೊಂದಿದ್ದ ಪ್ರತಿಯೊಂದು ಭಾವನೆಯನ್ನು ಕೊಂದಿದ್ದಾಳೆ’ ಎಂದಿದ್ದು ಸಾಕಷ್ಟುವಿವಾದವಾಗಿತ್ತು.
undefined
ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಧ್ಯಮಗಳು ಮತ್ತು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಬಗ್ಗೆ ವಿವಾದಾತ್ಮವಾಗಿ ಬರೆದಿದ್ದರು.
undefined
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ‘ಮೈ ಕಂಟ್ರಿ ಮೈ ಲೈಪ್‌’ ಆತ್ಮಚರಿತ್ರೆ ಮಾತ್ರವಲ್ಲ, ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿಯಂತಿದೆ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ.
undefined
ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್‌ ಅವರ ‘ಲೈಫ್‌ ಈಸ್‌ ನಾಟ್‌ ಇನಫ್‌’ ಆತ್ಮಚರಿತ್ರೆಯು ಕಾಂಗ್ರೆಸ್‌ ಮೊಗಸಾಲೆ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.
undefined
click me!