ಇಲಿಗಳ ಕಾಟ ಹೆಚ್ಚಾಗಿದ್ಯಾ? ಈರುಳ್ಳಿ ಇದ್ರೆ ಸಾಕು.. ಮತ್ತೆ ನಿಮ್ಮನೆ ಕಡೆ ಸುಳಿಯಲ್ಲ!

ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ರೆ, ಮನೆಯಲ್ಲಿರೋ ಕೆಲ ವಸ್ತುಗಳನ್ನ ಬಳಸಿ ಅವುಗಳನ್ನ ಓಡಿಸೋದು ಹೇಗೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಿ.

Natural Rat Control Easy Home Remedies to Get Rid of Rats gvd

ಮನೆಯಿಂದ ಇಲಿಗಳನ್ನ ನೈಸರ್ಗಿಕವಾಗಿ ಓಡಿಸೋದು ಹೇಗೆ : ಮನೆಯಲ್ಲಿ ಇಲಿ ಇದ್ರೆ ದೊಡ್ಡ ತಲೆನೋವು. ಇಲಿ ಕಾಟದಿಂದ ನಮಗೆ ತುಂಬಾ ರೋಗಗಳು ಹರಡುತ್ತವೆ. ಅದಕ್ಕೆ ಅವುಗಳನ್ನ ಮನೆಯಿಂದ ಓಡಿಸೋದು ತುಂಬಾನೇ ಮುಖ್ಯ. ಇದಕ್ಕಾಗಿ ನಾವು ಬೇರೆ ಬೇರೆ ತರಹದ ಔಷಧಿ ಮತ್ತೆ ಇಲಿ ಪಾಷಾಣ ತಂದು ಬಳಸಿರ್ತೀವಿ. ಆದ್ರೆ ಇಲಿ ಮಾತ್ರ ನಮಗೆ ಡೋಂಟ್ ಕೇರ್ ಅಂತ ಓಡಿ ಹೋಗುತ್ತೆ. ಚಿಕ್ಕ ಮಕ್ಕಳು ಇರೋ ಮನೆಯಲ್ಲಿ ಇಲಿ ಇದ್ರೆ ತುಂಬಾನೇ ಹುಷಾರಾಗಿರಬೇಕು. ಯಾಕಂದ್ರೆ ಮಕ್ಕಳು ಆಟ ಆಡೋ ವಸ್ತುಗಳಿಗೆ ಇಲಿ ಬಾಯಿ ಹಾಕಿದ್ರೆ ಅಥವಾ ಕಚ್ಚಿದ್ರೆ ಮಕ್ಕಳು ಅದನ್ನ ಮತ್ತೆ ಬಳಸೋಕೆ ಸಾಧ್ಯ ಇದೆ. ಇದರಿಂದ ಮಕ್ಕಳಿಗೆ ರೋಗಗಳು ಹರಡೋ ಚಾನ್ಸಸ್ ಇರುತ್ತೆ. ಅದಕ್ಕೆ ಮನೆಯಲ್ಲಿರೋ ಕೆಲ ವಸ್ತುಗಳನ್ನ ಬಳಸಿ ಮನೆಯಿಂದ ಇಲಿಗಳನ್ನ ಸುಲಭವಾಗಿ ಓಡಿಸೋದು ಹೇಗೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಿ.

Natural Rat Control Easy Home Remedies to Get Rid of Rats gvd

ಮನೆಗೆ ಇಲಿಗಳು ಬರೋಕೆ ಕಾರಣ

- ಮನೆಯಲ್ಲಿ ತಿಂಡಿ ತಿನಿಸುಗಳನ್ನ ಅಲ್ಲಲ್ಲಿ ಹಾಕಿದ್ರೆ, ಅದು ಇಲಿಗಳನ್ನ ಸೆಳೆಯುತ್ತೆ. 

- ಮಳೆಗಾಲದಲ್ಲಿ ಮನೆ ಹೊರಗಡೆ ಕಸದ ನೀರು ನಿಂತಿದ್ರೆ, ಚರಂಡಿ ನೀರು ಪೈಪ್ ಮೂಲಕ ಮನೆಗೆ ಇಲಿಗಳು ಸುಲಭವಾಗಿ ಬಂದುಬಿಡುತ್ತವೆ.

- ಚಳಿಗಾಲದಲ್ಲಿ ಇಲಿಗಳಿಗೆ ಬೆಚ್ಚಗಿರೋಕೆ ಜಾಗ ಬೇಕಾಗುತ್ತೆ, ಅದಕ್ಕೆ ಮನೆ ಒಳಗೆ ಬರುತ್ತವೆ.

- ಇಲಿಗಳಿಗೆ ಕಸ ಮತ್ತೆ ಕತ್ತಲೆ ಇರೋ ಜಾಗ ಅಂದ್ರೆ ಇಷ್ಟ. ಅದಕ್ಕೆ ಮನೆನ ಯಾವಾಗಲೂ ಕ್ಲೀನ್ ಆಗಿ ಮತ್ತೆ ಗಾಳಿ ಆಡೋ ಹಾಗೆ ಇಟ್ಕೊಳ್ಳಿ.


ಪುದೀನಾ ಎಣ್ಣೆ: ಇಲಿಗಳಿಗೆ ಪುದೀನಾ ಎಣ್ಣೆಯಿಂದ ಬರೋ ವಾಸನೆ ಇಷ್ಟ ಆಗಲ್ಲ. ಅದಕ್ಕೆ ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಪುದೀನಾ ಎಣ್ಣೆನ ಸಿಂಪಡಿಸಿ. ಇದನ್ನ ಹೀಗೆ ಮಾಡ್ತಾ ಇದ್ರೆ ಇಲಿ ಮನೆಯಿಂದ ಓಡಿ ಹೋಗುತ್ತೆ.

ಈರುಳ್ಳಿ: ಈರುಳ್ಳಿಯಿಂದ ಒಂದು ತರಹದ ಘಾಟು ವಾಸನೆ ಬರುತ್ತೆ. ಇಲಿಗಳಿಗೆ ಅದು ಇಷ್ಟ ಆಗಲ್ಲ. ಅದಕ್ಕೆ ಇಲಿಗಳು ಇರೋ ಜಾಗದಲ್ಲೋ ಅಥವಾ ಬರೋ ಜಾಗದಲ್ಲೋ ಈರುಳ್ಳಿನ ಕಟ್ ಮಾಡಿ ಇಡಿ. ಇದರಿಂದ ಇಲಿ ಮನೆ ಒಳಗಡೆ ಇದ್ರೂ ಓಡಿ ಹೋಗುತ್ತೆ, ಮತ್ತೆ ವಾಪಸ್ ಬರಲ್ಲ. ಈರುಳ್ಳಿ ಬೇಗ ಹಾಳಾದ್ರೆ ಮತ್ತೆ ಹೊಸ ಈರುಳ್ಳಿನ ಚೇಂಜ್ ಮಾಡಿ.

ಮೆಣಸಿನ ಪುಡಿ: ಮೆಣಸಿನ ಪುಡಿ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಇದ್ದೇ ಇರುತ್ತೆ. ಇದು ಇಲಿ ಓಡಿಸೋಕೆ ಸಹಾಯ ಮಾಡುತ್ತೆ. ಇದನ್ನ ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಹಾಕಿಬಿಡಿ. ಅದರಿಂದ ಬರೋ ಘಾಟು ವಾಸನೆ ಇಲಿ ಓಡಿಸುತ್ತೆ. 

ಬೆಳ್ಳುಳ್ಳಿ: ಬೆಳ್ಳುಳ್ಳಿನ ಸಿಪ್ಪೆ ತೆಗೆದು ಜಜ್ಜಿ ಇಟ್ಕೊಳ್ಳಿ. ಈಗ ಒಂದು ಬಟ್ಟಲಲ್ಲಿ ನೀರು ಹಾಕಿ ಅದರಲ್ಲಿ ಜಜ್ಜಿದ ಬೆಳ್ಳುಳ್ಳಿನ ಹಾಕಿ ಆ ಬಟ್ಟಲನ್ನ ಇಲಿ ಇರೋ ಜಾಗದಲ್ಲಿ ಅಥವಾ ಬರೋ ಜಾಗದಲ್ಲಿ ಇಡಬೇಕು. ಬೆಳ್ಳುಳ್ಳಿಯಿಂದ ಬರೋ ವಾಸನೆ ಇಲಿಗಳಿಗೆ ಇಷ್ಟ ಆಗಲ್ಲ ಅದಕ್ಕೆ ಇಲಿ ಓಡಿ ಹೋಗುತ್ತೆ. 

ಲವಂಗದ ಎಣ್ಣೆ: ಇಲಿಗಳಿಗೆ ಲವಂಗದ ಎಣ್ಣೆಯಿಂದ ಬರೋ ವಾಸನೆ ಇಷ್ಟ ಆಗಲ್ಲ. ಅದಕ್ಕೆ ಇಲಿ ಪೊಟರೆಯಲ್ಲಿ ಒಂದು ಹನಿ ಲವಂಗದ ಎಣ್ಣೆ ಹಾಕಿ ಅಥವಾ ಸಿಂಪಡಿಸಿ. ಇದರಿಂದ ಇಲಿ ಅಲ್ಲಿಂದ ಓಡಿ ಹೋಗುತ್ತೆ.

ಬಿರಿಯಾನಿ ಎಲೆ : ಬಿರಿಯಾನಿ ಎಲೆಯಿಂದ ಬರೋ ಘಾಟು ವಾಸನೆ ಇಲಿಗಳಿಗೆ ಇಷ್ಟ ಆಗಲ್ಲ. ಅದಕ್ಕೆ ಅದನ್ನ ಇಲಿಗಳು ಇರೋ ಜಾಗದಲ್ಲಿ ಇಟ್ಟರೆ, ಅದನ್ನ ತಿಂದ ಸ್ವಲ್ಪ ಹೊತ್ತಿಗೆ ಇಲಿಗಳು ಸತ್ತು ಹೋಗುತ್ತವೆ. ಹಾಗೇನೇ ಇಲಿಗಳು ಬರೋ ಜಾಗದಲ್ಲೂ 2-3 ಬಿರಿಯಾನಿ ಎಲೆಗಳನ್ನ ಹಾಕಿ.

Latest Videos

vuukle one pixel image
click me!