ಲಿಕ್ವಿಡ್ ಸೋಪಿನಿಂದ ಮನೆಯಲ್ಲಿರುವ ನೀರಿನ ಪೈಪ್‌ಗಳು, ನಲ್ಲಿಗಳು, ಶವರ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಹೊಸದರಂತೆ ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಕಿ ಅದರಲ್ಲಿ ಡಿಶ್ ವಾಶಿಂಗ್ ಲಿಕ್ವಿಡ್ ಸೋಪು, ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ. ಇದರಿಂದ ಪೈಪ್‌ಗಳು, ನೀರಿನ ನಲ್ಲಿಗಳನ್ನು ಸ್ವಚ್ಛಗೊಳಿಸಿ. ಇದು ಕಲೆಗಳನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ನಲ್ಲಿಗಳ ಮೇಲೆ ಇದನ್ನು ಚೆನ್ನಾಗಿ ಉಜ್ಜಿ ಸ್ವಲ್ಪ ಸಮಯದ ನಂತರ ಬ್ರಷ್‌ನಿಂದ ಉಜ್ಜಿ ಸ್ವಚ್ಛಗೊಳಿಸಿ. ಇದರಿಂದ ಪೈಪ್‌ಗಳು ಹೊಸದರಂತೆ ಹೊಳೆಯುತ್ತವೆ.