ಹಾವೇರಿ[ಮಾ.22]: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಇಂದು ದೇಶಾದ್ಯಂತ ಜನತಾ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಜನತಾ ಕರ್ಪ್ಯೂದಿಂದ ಹೋಟೆಲ್, ಅಂಗಡಿಗಳು ಮುಚ್ಚಿರುವುದರಿಂದ ನೀರು, ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರಿಗೆ ಹಾವೇರಿಯ ಕೆಲ ಸ್ವಯಂ ಸೇವಕರು ಪಲಾವ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ನಗರದ ಎಲ್ಲ ರಸ್ತೆಗಳಲ್ಲಿ ಸಂಚರಿಸಿ ಆಹಾರದ ಅಗತ್ಯವಿರುವವರಿಗೆ ಪಲಾವ್ ಹಂಚಿಕೆ ಮಾಡುತ್ತಿದ್ದಾರೆ.