ನಮ್ಮ ಮೆಟ್ರೋದಲ್ಲಿ ಆಟಿಕೆ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿ ಪೊಲೀಸರ ಅತಿಥಿಯಾದ ಯುವಕ

Published : Mar 08, 2026, 02:14 PM IST

ನಮ್ಮ ಮೆಟ್ರೋದಲ್ಲಿ ಪ್ರಾಂಕ್‌ ವಿಡಿಯೋ ಮಾಡಲು ನಕಲಿ ಗನ್‌ ಇಟ್ಟುಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಹ ಪ್ರಯಾಣಿಕರ ದೂರಿನ ಮೇರೆಗೆ ಕ್ರಮ ಕೈಗೊಂಡ ಅಧಿಕಾರಿಗಳು, ಯುವಕನಿಂದ ಕ್ಷಮಾಪಣಾಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

PREV
15
ನಮ್ಮ ಮೆಟ್ರೋ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೇಬಿನಲ್ಲಿ ನಕಲಿ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ. ಪಾಂಡಿಚೇರಿ ಮೂಲದ ಅರ್ಜುನ್‌ ಎಂಬಾತನನ್ನು ವಶಕ್ಕೆ ಪಡೆದು, ಕ್ಷಮಾಪಣಾಪತ್ರ ಬರೆಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

25
ನಮ್ಮ ಮೆಟ್ರೋದಲ್ಲಿ ಪ್ರಯಾಣ

ಫೆಬ್ರವರಿ 6 ರಂದು ಅರ್ಜುನ್‌ ದೀಪಾಂಜಲಿ ನಗರದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಾಂಕ್‌ ವಿಡಿಯೋ ಮಾಡಲು ತನ್ನ ಜೇಬಿನಲ್ಲಿ ಆಟಿಕೆಯ ಗನ್‌ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಗನ್‌ ಕಂಡು ಕೋಪಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

35
ಯುವಕ ವಶಕ್ಕೆ

ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕ್ಷಮಾಪಣಾಪತ್ರ ಬರೆಸಿಕೊಂಡಿದ್ದಾರೆ. ಈ ವೇಳೆ ಅರ್ಜುನ್‌ನಿಂದ ತಪ್ಪೊಪ್ಪಿಗೆ ಪಡೆದುಕೊಂಡಿದ್ದು ಅದನ್ನು ಬಿಸಿಪಿ ಖಾತೆಯಲ್ಲಿ ಅಪ್‌ಲೋಡ್‌ ಮಾಡಿ ಜಾಗೃತಿ ಮೂಡಿಸಿದ್ದಾರೆ.

45
ತಮಾಷೆ ಅಲ್ಲ

ಆಟಿಕೆ ಗನ್‌ನಿಂದ ಮಾಡುವ ಪ್ರಾಂಕ್ ಯಾವುದೇ ತಮಾಷೆ ಅಲ್ಲ. ಇದು ಸಾರ್ವಜನಿಕರಲ್ಲಿ, ಭಯ ಹುಟ್ಟಿಸಿ, ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟು ಮಾಡಬಹುದು. ಸಾರ್ವಜನಿಕ ಸ್ಥಳಗಳು ಅಪಾಯಕಾರಿ ಕಂಟೆಂಟ್‌ಗೆ ಸ್ಥಳವಲ್ಲ. ಈ ರೀತಿಯಲ್ಲಿ ವರ್ತಿಸುವ ಮುನ್ನ ಯೋಚಿಸಿ. ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಾರೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

55
ನಿಯಮಗಳ ಪಾಲನೆ

ನಮ್ಮ ಮೆಟ್ರೋ ಪ್ರಯಾಣದಲ್ಲಿ ಪ್ರಯಾಣಿಕರು ಬಿಎಂಆರ್‌ಸಿಎಲ್ ಸೂಚಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಹಿಂದೆ ವ್ಯಕ್ತಿಯೋರ್ವ ಮೆಟ್ರೋದಲ್ಲಿ ಆಹಾರ ಸೇವಿಸಿದ್ದ ವಿಡಿಯೋ ವೈರಲ್ ಆಗಿತ್ತು. ನಿಯಮ ಉಲ್ಲಂಘನೆ ಹಿನ್ನೆಲೆ ವ್ಯಕ್ತಿಗೆ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರು- ಕನಕಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಕಾರ್‌ನಲ್ಲಿದ್ದ ಮೂವರ ದುರ್ಮರಣ

Read more Photos on
click me!

Recommended Stories