ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

Published : Mar 08, 2026, 01:29 PM IST

ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಕೊಟ್ರಯ್ಯ, 'ಮಗ್ಗಿ ಅಜ್ಜಯ್ಯ' ಎಂದೇ ಜನಪ್ರಿಯರಾಗಿದ್ದಾರೆ. ಕೇವಲ 8ನೇ ತರಗತಿ ಓದಿದ್ದರೂ, ಇವರು ಕಂಪ್ಯೂಟರ್‌ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಬಿಡಿಸುವ ಮೂಲಕ 'ಮಾನವ ಕಂಪ್ಯೂಟರ್' ಎನಿಸಿಕೊಂಡಿದ್ದಾರೆ. ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಮಗ್ಗಿ ಕೊಟ್ರಯ್ಯ ಅಜ್ಜಯ್ಯ

ಗಣಿತ ಅಂದ್ರೆ ಕಬ್ಬಿಣದ ಕಡಲೆ ಎಂಬ ಮಾತಿದೆ. ಆದ್ರೆ ಈ ಕಡಲೆ ಬಿಡಿಸುವ ವಿಧಾನ ತಿಳಿದುಕೊಂಡ್ರೆ ಗಣಿತದಷ್ಟು ಸುಲಭದ ಮತ್ತೊಂದು ವಿಷಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಇನ್ನು ಗಣಿತ ಬಲ್ಲವ ಎಲ್ಲಾ ವಿಷಯಗಳಲ್ಲಿಯೂ ಜಾಣನಾಗಿರುತ್ತಾನೆ. ಆದರೂ ಇಂದು ಎಷ್ಟೋ ಜನರು ಗಣಿತ ಅಂದ್ರೆ ಹೆದರುತ್ತಾರೆ. ಭಾರತದ ಶಕುಂತಲಾ ದೇವಿ ಅವರನ್ನು ಮಾನವ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಆದ್ರೆ ನಮ್ಮ ರಾಜ್ಯದಲ್ಲಿರುವ ಮಗ್ಗಿ ಕೊಟ್ರಯ್ಯ ಅಜ್ಜಯ್ಯನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.

25
ಕಂಪ್ಯೂಟರ್‌ಗಿಂತಲೂ ವೇಗ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ನಿವಾಸಿಯಾಗಿರುವ ಕೊಟ್ರಯ್ಯ ಅವರು ಈ ಭಾಗದಲ್ಲಿ ಮಗ್ಗಿ ಅಜ್ಜಯ್ಯ ಎಂದು ಜನಪ್ರಿಯರು. ಇವರ ಲೆಕ್ಕಗಳನ್ನು ಕೇಳಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಸಾಮಾನ್ಯರಲ್ಲಿ ಸಾಮನ್ಯರಂತೆ ಕಾಣುವ ಕೊಟ್ರಯ್ಯ, ಲೆಕ್ಕವನ್ನು ಕಂಪ್ಯೂಟರ್‌ಗಿಂತಲೂ ವೇಗವಾಗಿ ಪರಿಹರಿಸುತ್ತಾರೆ.

35
ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್

ಕೊಟ್ರಯ್ಯ ಅಜ್ಜನವರು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ನಮ್ಮ ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್ "ಮಗ್ಗಿ ಕೊಟ್ರಯ್ಯ" ಅಜ್ಜ. ಲಕ್ಷ ಲಕ್ಷ ಕೊಟ್ಟು ಇಂಗ್ಲಿಷ್ ಮೀಡಿಯಂ ಓದಿದವರು, ನಿಮ್ಮ ಮುಂದೆ ಬಚ್ಚಾಗಳು ತಾತ. ಯಪ್ಪಾ ದೇವರೇ, ಎನ್ ಪಾ ಇವರ್ ಟ್ಯಾಲೆಂಟ್. ದೇವರು ನಿಮಗೆ ಒಳ್ಳೆ ಆರೋಗ್ಯ ಕೊಡಲಿ ತಾತ, ಸದಾ ಹಸನ್ಮುಖಿಯಾಗಿರಿ, ನಿಮಗಿರುವ ಟ್ಯಾಲೆಂಟ್‌ಗೆ ಎಷ್ಟು ದುಡ್ಡು ಕೊಟ್ಟರೂ ಸಾಲದು ಎಂದು ಕಮೆಂಟ್ ಮಾಡಿದ್ದಾರೆ.

45
ಗುಣಕಾರದ ಪ್ರಶ್ನೆ

halekotturu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಕೊಟ್ರಯ್ಯ ಅಜ್ಜನವರ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಒಂದಿಷ್ಟು ಅಂಕೆಗಳ ಗುಣಕಾರದ ಪ್ರಶ್ನೆ ಮಾಡುತ್ತಾರೆ. ಅಜ್ಜಯ್ಯ ಒಂದು ಕ್ಷಣವೂ ಯೋಚಿಸದೇ ಉತ್ತರ ನೀಡುತ್ತಾರೆ. ಇದೆಲ್ಲಾ ಹೇಗೆ ಬರುತ್ತೆ ಅಂತ ಕೇಳಿದಾಗ, ಅಂದಾಜಿನಲ್ಲಿ ಹೇಳುತ್ತೇನೆ ಅಂತಾರೆ. ಈ ಕೊಟ್ರಯ್ಯ ಅಜ್ಜಯ್ಯ ಹೇಳುವ ಪ್ರಕಾರ, ಇವರು 8ನೇ ತರಗತಿವರೆಗೆ ಮಾತ್ರ ಓದಿದ್ದಾರೆ.

55
15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌

ಇದೇ ವಿಡಿಯೋದಲ್ಲಿ ಜನರು, ತಮಗೆ ಒಂದಿಷ್ಟು ಹಣದ ಸಹಾಯ ಮಾಡುತ್ತಾರೆ ಅಂತಾನೂ ಹೇಳಿದ್ದಾರೆ. ಮಗ್ಗಿ ಅಜ್ಜಯ್ಯನವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಈ ವಿಡಿಯೋಗೆ 15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ನಿಮಗೂ ಈ ಮಗ್ಗಿ ಅಜ್ಜಯ್ಯವರನ್ನು ನೋಡಿದ್ದೀರಾ? ಅವರೊಂದಿಗೆ ಮಾತನಾಡಿದ್ದೀರಾ? ಅಜ್ಜಯ್ಯ ಜೊತೆಗಿನ ನಿಮ್ಮ ಅನುಭವವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.

Read more Photos on
click me!

Recommended Stories