ಹೊಸಪೇಟೆ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆ, ಜೀವದ ಹಂಗು ತೊರೆದು ಅಜ್ಜಿ ಕಾಪಾಡಿದ ಯುವಕ

First Published | Aug 23, 2020, 1:52 PM IST

ಬಳ್ಳಾರಿ(ಆ.23): ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಸಿನಿಮೀಯ ಸ್ಟೈಲ್‌ನಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ವೃದ್ಧೆಯೊಬ್ಬಳು ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದಳು. ಈ ವೇಳೆ ಅಜೇಯ್ ಎಂಬ ಯುವಕ ನೀರಿಗೆ ಹಾರಿ ವೃದ್ಧೆಯನ್ನ ರಕ್ಷಿಸಿದ್ದಾನೆ.

ಹೊಸಪೇಟೆಯಲ್ಲೊಂದು ಸಿನಿಮೀಯ ಸ್ಟೈಲ್‌ನಲ್ಲಿ ನಡೆದ ಘಟನೆ
ಪ್ರಾಣದ ಹಂಗು ತೊರೆದು ವೃದ್ದೆಯನ್ನು ಕಾಪಾಡಿದ ಅಜೇಯ್ ಎಂಬ ಯುವಕ
Tap to resize

ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹೆಚ್.ಎಲ್.ಸಿ ಕಾಲುವೆಯಲ್ಲಿ ನಡೆದ ಘಟನೆ
ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದ ವೃದ್ಧೆ
ನೀರಿನಲ್ಲಿ ಬಿದ್ದು ಮುಳುಗಿ ನೀರಿನ ರಭಸಕ್ಕೆ ಹರಿದು ಹೋಗುತ್ತಿದ್ದ ಅಜ್ಜಿ
ಅಕ್ಕ ಪಕ್ಕದ ಜನರ ಕೂಗಾಟ ಚೀರಾಟ ಕೇಳಿ ಪ್ರಾಣದ ಹಂಗು ತೊರೆದು ನೀರಿಗೆ ಜಿಗಿದು ವೃದ್ಧೆಯ ಪ್ರಾಣ ಉಳಿಸಿದ ಯುವಕ
ನೀರಿಗೆ ಬಿದ್ದ ವೃದ್ಧೆಯನ್ನು ಮೇಲೆತ್ತಲು ಅಜೇಯ್‌ಗೆ ಸಾಥ್‌ ನೀಡಿದ ಸ್ಥಳೀಯರು

Latest Videos

click me!