ಈಜಲು ಹೋದ ಕೊಪ್ಪಳದ ಯುವಕ ನೀರಿನಲ್ಲಿ ಮುಳುಗಿ ಸಾವು, ಮತೃದೇಹಕ್ಕಾಗಿ ಹುಡುಕಾಟ

Published : May 10, 2026, 09:41 PM IST

17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

PREV
14
ಈಜಲು ತೆರಳಿದ ಯುವಕ ಸಾವು

ಬಿಸಿಲ ಬೇಗೆ ಕಾರಣ ಹಲವರು ನದಿ, ಕೆರೆ ಸೇರಿದಂತೆ ಹಲೆವೆಡೆ ಈಜಾಡಲು ತೆರಳುತ್ತಿದ್ದಾರೆ. ಇತ್ತ ಮೇ ತಿಂಗಳ ಕಾರಣ ಹಲವು ನದಿಗಳು, ಕೆರೆಗಳಲ್ಲಿ ನೀರಿನ ಪ್ರಮಾಣವೂ ಕಡಿಮೆ ಇದೆ. ಆದರೆ ಭಾರಿ ಗುಂಡಿ ಪ್ರದೇಶಗಳಲ್ಲಿ ನೀರು ನಿಂತುಕೊಂಡಿರುತ್ತದೆ. ಈ ಆಳವನ್ನು ಅಕಿಯದೇ ಈಜಲು ತೆರಳುತ್ತಿರುವಾಗ ದುರಂತಗಳು ನಡೆಯುತ್ತಿದೆ. ಇದೀಗ ಕೊಪ್ಪಳದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೋದೂರು ಗ್ರಾಮದಲ್ಲಿ ದುರಂತ ನಡೆದಿದೆ.

24
ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಸಾವು

17ರ ಹರೆಯದ ಅಪ್ಪಾಜಿಗೌಡ ಹಾಗೂ ಇತರ ಐವರು ಸೇರಿ ಈಜಾಡಲು ಹೋಗಿದ್ದಾರೆ. ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನೇಹಿತರು ಅಪ್ಪಾಜಿಗೌಡನ ಬದುಕಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

34
ಸ್ಥಳಕ್ಕೆ ಅಗ್ನಿಶಾಮಕದಳ ದೌಡು

ಆರು ಸ್ನೇಹಿತರು ಈಡಾಜುತ್ತಿದ್ದಂತೆ ದುರಂತ ನಡೆದಿದೆ. ಅಪ್ಪಾಜಿಗೌಡನ ಏಕಾಏಕಿ ನೀರಿನ ಆಳಕ್ಕೆ ಮುಳುಗಿದ್ದಾನೆ. ಹೀಗಾಗಿ ಇತರ ಸ್ನೇಹಿತರು ಸಹಾಯಕ್ಕಾಗಿ ಕೂಗಿದ್ದಾರೆ. ಸ್ಛಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿದೆ.

44
ಅಪ್ಪಾಜಿಗೌಡ ಮೃತದೇಹಕ್ಕಾಗಿ ಹುಡುಕಾಟ

ನೀರಿನಲ್ಲಿ ಮುಳುಗಿ ಮೃತಪಟ್ಟ ಅಪ್ಪಾಜಿಗೌಡ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂಧಿಗಳು ಹುಡುಕಾಟ ನಡೆಸುತ್ತಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪ್ಪಾಜಿಗೌಡ ಮೃತದೇಹಕ್ಕಾಗಿ ಹುಡುಕಾಟ

Read more Photos on
click me!

Recommended Stories