ಮೈಸೂರು ಮಹಾರಾಣಿಯ ಹುಟ್ಟುಹಬ್ಬವಿಂದು: Yaduveer​- Rishika Kumariಯ ರೋಚಕ ಲವ್​ ಸ್ಟೋರಿ ಇಲ್ಲಿದೆ

Published : Oct 22, 2025, 02:47 PM IST

ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ತಮ್ಮ ಸರಳತೆಯಿಂದಲೇ ಹೆಸರುವಾಸಿಯಾದ ಅವರ ಪ್ರೇಮಕಥೆ, ದಿನಚರಿ ಮತ್ತು ಯದುವೀರ್ ಒಡೆಯರ್ ಅವರು ಹಂಚಿಕೊಂಡಿರುವ ಪ್ರೀತಿಯ ಶುಭಾಶಯದ ಕುರಿತು ಈ ಲೇಖನ ವಿವರಿಸುತ್ತದೆ.

PREV
17
ಸರಳತೆಯ ಪ್ರತೀಕ

ತುಂಬಿಕ ಕೊಡ ತುಳುಕುವುದಿಲ್ಲ ಎನ್ನುವ ಗಾದೆಮಾತಿಗೆ ಸಾಕ್ಷಿಯಾಗಿರುವ ಕೆಲವೇ ಕೆಲವು ಜನರಲ್ಲಿ, ಮೈಸೂರು ಮಹಾರಾಜ ಸಂಸದ ಯದುವೀರ ದತ್ತ ವಡೆಯರ್​ ಅವರ ಪತ್ನಿ ಮಹಾರಾಣಿ ರಿಷಿಕಾ ಕುಮಾರಿ ಕೂಡ ಒಬ್ಬರು. ಮಹಾರಾಣಿಯಾಗಿದ್ದರೂ ತಮ್ಮ ಸರಳತೆಯಿಂದ ಸದಾ ಅವರು ಜನರ ಮನಸ್ಸನ್ನು ಗೆಲ್ಲುತ್ತಲೇ ಇದ್ದಾರೆ. ಇಂತಿಪ್ಪ ರಿಷಿಕಾ ಕುಮಾರಿ ಅವರಿಗೆ ಇಂದು (ಅಕ್ಟೋಬರ್​ 22) ಹುಟ್ಟುಹಬ್ಬದ ಸಂಭ್ರಮ.

27
ಯದುವೀರರ ವಿಷ್​

ಈ ಸಮಯದಲ್ಲಿ ಪತಿ ಯದುವೀರ ಅವರು ಪತ್ನಿಗೆ ಸೋಷಿಯಲ್​​ ಮೀಡಿಯಾದಲ್ಲಿ ಕ್ಯೂಟ್​ ಸಂದೇಶದೊಂದಿಗೆ ವಿಷ್​ ಮಾಡಿದ್ದಾರೆ. ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

37
ಯದುವೀರರ ವಿಷ್​

ಈ ಸಮಯದಲ್ಲಿ ಪತಿ ಯದುವೀರ ಅವರು ಪತ್ನಿಗೆ ಸೋಷಿಯಲ್​​ ಮೀಡಿಯಾದಲ್ಲಿ ಕ್ಯೂಟ್​ ಸಂದೇಶದೊಂದಿಗೆ ವಿಷ್​ ಮಾಡಿದ್ದಾರೆ. ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

47
ಇಬ್ಬರು ಮಕ್ಕಳು

ಅಂದಹಾಗೆ ತ್ರಿಷಿಕಾ, ರಾಜಸ್ಥಾನದ ದುಂಗರ್‌ಪುರ್ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ ಕುಮಾರಿ ಅವರ ಪುತ್ರಿ. ಮೊದಲ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ 2017 ರಲ್ಲಿ ಜನಿಸಿದರೆ ಎರಡನೆಯ ಪುತ್ರ ಕಳೆದ ವರ್ಷ 2024 ರಲ್ಲಿ ಜನಿಸಿದ್ದಾನೆ.

57
ಯದುವೀರ ಮತ್ತು ತ್ರಿಷಿಕಾರ ಲವ್​ಸ್ಟೋರಿ

ಯದುವೀರ ಮತ್ತು ತ್ರಿಷಿಕಾರ ಲವ್​ಸ್ಟೋರಿ ಕೂಡ ರೋಚಕವಾಗಿದೆ. 2016ರ ಜೂನ್​ 27ರಂದು ಇವರ ವಿವಾಹ ನಡೆದಿದೆ. ಲಂಡನ್‌ನಲ್ಲಿ ಓದುತ್ತಿರುವಾಗಲೇ ಇವರಿಬ್ಬರ ಲವ್​ ಸ್ಟೋರಿ ಶುರುವಾಗಿದ್ದು. ಇವರಿಬ್ಬರೂ ಬಾಲ್ಯದಲ್ಲಿಯೇ ಫಂಕ್ಷನ್​ಗಳಲ್ಲಿ ಭೇಟಿಯಾಗುತ್ತಿದ್ದರೂ, ಸ್ನೇಹ ಏನೂ ಇರಲಿಲ್ಲ. ಯದುವೀರ್‌ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ ಓದಿದರೆ, ತ್ರಿಶಿಕಾ ಬಾಲ್ಡ್‌ವಿನ್‌ ಕಾಲೇಜು, ಜ್ಯೋತಿನಿವಾಸ್‌ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಷನಲ್‌ ಸ್ಕೂಲಿನಲ್ಲಿ ಕಲಿತವರು.

67
ಅಮೆರಿಕದಲ್ಲಿ ಪ್ರೀತಿ

ಬಳಿಕ ಉನ್ನತ ಶಿಕ್ಷಣಕ್ಕೆ ಇವರು ಹೋಗಿದ್ದು ಅಮೆರಿಕಕ್ಕೆ. ಅಲ್ಲಿಯೇ ಶುರುವಾಯ್ತು ಲವ್​ ಎಂದು ಹೇಳಲಾಗುತ್ತಿದೆ. ಅಮೆರಿಕದ ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್‌ ಯೂನಿವರ್ಸಿಟಿಯಲ್ಲಿ ಯದುವೀರ್‌ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಎಕಾನಮಿಕ್ಸ್ ಮತ್ತು ಇಂಗ್ಲಿಷ್‌ ಓದಿದರು. ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಆಪ್ತ ವಲಯಗಳು ಹೇಳುತ್ತವೆ.

77
ದಿನಚರಿ ಹೀಗಿದೆ

ಕೊನೆಗೆ ಇಬ್ಬರೂ ಮದುವೆಯಾಗಿ, ಈಗ ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ. ಕುತೂಹಲದ ವಿಷಯ ಎಂದರೆ, ಮಹಾರಾಜರ ಕುಟುಂಬ ಅಲ್ವಾ, ಎಲ್ಲವೂ ಕಟ್ಟುನಿಟ್ಟು. ರಾತ್ರಿ ಒಂಬತ್ತೂವರೆಗೆಲ್ಲ ಮಲಗಿ, ಐದು ಗಂಟೆಗೆ ಏಳುವುದು ಇವರ ದಿನಚರಿ. ಇಬ್ಬರೂ ಯೋಗಾಭ್ಯಾಸ ಮಾಡುತ್ತಾರೆ, ತ್ರಿಷಿಕಾ ದಿನಕ್ಕೊಮ್ಮೆ ಹನುಮಾನ್‌ ಚಾಲೀಸಾ ಕೂಡ ಪಠಿಸುತ್ತಾರಂತೆ.

Read more Photos on
click me!

Recommended Stories