ಬಳ್ಳಾರಿ: ಸಜ್ಜನ್‌ ಜಿಂದಾಲ್‌ ಮುಖವಾಡ ಧರಿಸಿ ನೊಂದ ನೌಕರರ ಭಿಕ್ಷಾಟನೆ

First Published Sep 10, 2020, 11:40 AM IST

ಬಳ್ಳಾರಿ(ಸೆ.10): ವಿನಾಕಾರಣ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿಂದಾಲ್‌ ಕೆಲಸ ವಂಚಿತ ನೌಕರರು ನಗರದಲ್ಲಿ ಬುಧವಾರ ಜಿಂದಾಲ್‌ ಕಂಪನಿ ನೀಡಿದ ಜಾಕೆಟ್‌ಗಳನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಸೇರಿದಂತೆ ವಿವಿಧ ಅಧಿಕಾರಿಗಳ ಮುಖವಾಡ ಧರಿಸಿ ಭಿಕ್ಷಾಟನೆ ಮಾಡಿದ ಕೆಲಸ ವಂಚಿತ ನೌಕರರು
undefined
ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಅವರು ಕಂಪನಿ 590 ಕೋಟಿ ನಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ಅವರ ನಷ್ಟವನ್ನು ತುಂಬಿಕೊಡಬೇಕು. ಅವರು ಎಂದೂ ಶ್ರೀಮಂತರಾಗಿಯೇ ಇರಬೇಕು. ಯಾವುದೇ ಕಾರಣಕ್ಕೂ ನಷ್ಟವಾಗಬಾರದು ಎಂದು ಜಿಂದಾಲ್‌ನವರು ನಮ್ಮ ಕೆಲಸ ಕಳೆದರೂ ಸಹ ಅವರಿಗಾಗಿ ನಗರದಲ್ಲಿ ಭಿಕ್ಷಾಟನೆ ಮಾಡಿ ಬಂದ ಹಣವನ್ನು ಅವರಿಗೆ ಕಳಿಸಿಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದ ಕೆಲಸ ವಂಚಿತ ನೌಕರರು
undefined
ಹತ್ತಾರು ವರ್ಷಗಳ ಕಾಲ ನೌಕರರಿಂದ ದುಡಿಸಿಕೊಂಡಿರುವ ಜಿಂದಾಲ್‌ ಕಂಪನಿ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕುತ್ತಿರುವುದು ತೀವ್ರ ಖಂಡನೀಯ.
undefined
ಜಿಂದಾಲ್‌ ನಡೆಯ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ. ರಾಜಶೇಖರ ಮುಲಾಲಿ ಅವರ ನೇತೃತ್ವದಲ್ಲಿ ನಾವು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
undefined
ಜಿಂದಾಲ್‌ ಮುಖ್ಯಸ್ಥರಾದ ಸಜ್ಜನ್‌ ಜಿಂದಾಲ್‌, ಸಂಗೀತಾ ಜಿಂದಾಲ್‌, ವಿನೋದ್‌ ನಾವಲ್‌, ಮಂಜುನಾಥ ಪ್ರಭು ಮತ್ತಿತರರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು.
undefined
ಜಿಂದಾಲ್‌ನ ಕೆಲಸ ವಂಚಿತ ವೆಂಕಟರಮಣ, ಶ್ರೀಪಾದ ಜೋಷಿ, ಜಾಹ್ನವಿ, ಭಾಗ್ಯಾ, ಶ್ರೀನಿವಾಸರಾವ್‌, ಗುರುಪ್ರಸಾದ್‌, ಸಿರಾಜ್‌, ಚಿದಾನಂದಪ್ಪ ಹಾಗೂ ಹತ್ತಾರು ಜನರು ಭಿಕ್ಷಾಟನೆ ಹೋರಾಟದಲ್ಲಿ ಭಾಗಿಯಾಗಿದ್ದರು.
undefined
ನನಗೆ ಪ್ರಾಣಭಯವಿದೆ, ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡ ಜಿಂದಾಲ್‌ ಕೆಲಸ ವಂಚಿತ ನೌಕರರಾದ ಜಾಹ್ನವಿ
undefined
ನನಗೆ ಬೆದರಿಕೆ ಕರೆ ಬಂದಿದೆ. ಯಾರೆಂದು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುವುದಿಲ್ಲ. ನಾನು ಓರ್ವಳೆ ಇರುತ್ತೇನೆ. ಹೀಗಾಗಿ ನನಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.
undefined
click me!