ಒಂದು ತಿಂಗಳಿನಿಂದ ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಈಗ ದರ್ಶನಕ್ಕೆ ಮುಂದಾದ ಭಕ್ತರು
ರಾಮಾಯಣ ಇತಿಹಾಸ ಹೊಂದಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಪ್ರದೇಶದ ಕಿಷ್ಕಿಂಧೆಯ ಅಂಜನಾದ್ರಿ ವಿಶ್ವ ವಿಖ್ಯಾತಿ ಪಡೆದಿದೆ.
ಕಳೆದ ಆರು ತಿಂಗಳಿನಿಂದ ಕೊರೋನಾ ಸೋಂಕಿನಿಂದ ಬೇಸತ್ತ ಭಕ್ತರು ಈಗ ದೇವರ ಮೊರೆ ಹೊಕ್ಕಿದ್ದಾರೆ. ಈಗ ಸರ್ಕಾರ ಕೊರೋನಾ ಮಾಗರ್ಸೂಚಿ ಸಡಿಲಗೊಳಿಸಿದ್ದರಿಂದ ದೇವಸ್ತಾನಗಳ ಬಾಗಿಲು ತೆರೆದಿದ್ದು, ಭಕ್ತರು ದೇವಸ್ಥಾನಗಳಿಗೆ ತೆರಳಿ ಕೊರೋನಾ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.
ದೇವಸ್ಥಾನ ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆಯಲಾಗುತ್ತಿದ್ದು, ಸಂಜೆ 6ರ ವರೆಗೆ ಪ್ರವೇಶ ಕಲ್ಪಿಸಲಾಗಿದೆ. ಈಗ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಕನಾರ್ಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ದಿನ ನಿತ್ಯ ಆಗಮಿಸುತ್ತಿದ್ದಾರೆ. ಮಾಸ್ಕ್ , ಸ್ಯಾನಿಟೈಸರ್ ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ದರ್ಶನ ಪಡೆಯ ಬಹುದಾಗಿದೆ.
ದೇವಸ್ಥಾನಗಳ ಬಾಗಿಲು ತೆರೆದಿದ್ದರಿಂದ ದಿನ ನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಅಂಜನಾದ್ರಿ ಪರ್ವತಕ್ಕೆ ಬರುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ.
ಬೆಟ್ಟ ಹತ್ತುವ ಒಂದು ಮಾರ್ಗ ಮತ್ತು ಬೆಟ್ಟದಿಂದ ನಿರ್ಗಮಿಸಲು ಬೇರೆ ಮಾರ್ಗ ಮಾಡಲಾಗಿದೆ. ದಿನಕ್ಕೆ ಮೂರು ಬಾರಿ ದೇವಸ್ಥಾನದ ಆವರಣ ಮತ್ತು ಮೆಟ್ಟಿಲುಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲಾಗುತ್ತದೆ. ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶನಿವಾರ ಮಾತ್ರ 5 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವೃದ್ಧರಿಗೆ ದರ್ಶನದ ಅವಕಾಶ ನೀಡುವುದಿಲ್ಲ ಎಂದು ಅಂಜನಾದ್ರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಹಾಗೂ ಕಂದಾಯ ನಿರೀಕ್ಷಕರು ಮಂಜುನಾಥಸ್ವಾಮಿ ಅವರು ತಿಳಿಸಿದ್ದಾರೆ.