ಬೆಂಗಳೂರಲ್ಲಿ ವಾಕಿಂಗ್‌ ಮಾಡೋ ಮಹಿಳೆಯರೇ ಹುಷಾರ್! ₹5 ಲಕ್ಷ ಸರ ಕಿತ್ತುಕೊಂಡ ಕಳ್ಳ

Published : Feb 03, 2026, 01:28 PM IST

Woman evening walk robbed of 5 lakhs worth gold chain in Bengaluru ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿ ನಿನ್ನೆ ಸಂಜೆ ಭೀಕರ ಸರಗಳ್ಳತನ ಪ್ರಕರಣ ನಡೆದಿದೆ. 

PREV
14
ಸರಗಳ್ಳತನ ಪ್ರಕರಣ

ಬೆಂಗಳೂರು: ರಸ್ತೆಗಳಲ್ಲಿ ಬೈಕ್‌ನಲ್ಲಿ ಬಂದು ಸರ ಕಸಿಯುತ್ತಿದ್ದ ಸರಗಳ್ಳರು, ಈಗ ಪಾರ್ಕ್‌ನಲ್ಲಿ ವಾಕ್ ಮಾಡುವ ಮಹಿಳೆಯರನ್ನೂ ಬಿಡುತ್ತಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿ ನಿನ್ನೆ ಸಂಜೆ ಭೀಕರ ಸರಗಳ್ಳತನ ಪ್ರಕರಣ ನಡೆದಿದೆ.

24
ಚಾಕು ತೋರಿಸಿ ಬೆದರಿಕೆ

ಮಾಚೋಹಳ್ಳಿಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವೃಕ್ಷೋದ್ಯಾನವನದಲ್ಲಿ ಸಂಜೆ 5:30ರ ಸುಮಾರಿಗೆ ದಿನನಿತ್ಯದಂತೆ ವಾಕ್ ಮಾಡುತ್ತಿದ್ದ ಸುಮಾರು 52 ವರ್ಷದ ಮಹಿಳೆಯನ್ನು ಶಂಕಿತ ವ್ಯಕ್ತಿಯೊಬ್ಬನು ಚಾಕು ತೋರಿಸಿ ಬೆದರಿಸಿ ಸರ ಕಸಿದುಕೊಂಡಿದ್ದಾನೆ.

34
ಚಿನ್ನದ ಸರ ಕಿತ್ತುಕೊಂಡ ಕಳ್ಳ

ಪೊಲೀಸರ ಮಾಹಿತಿ ಪ್ರಕಾರ, ಮಹಿಳೆ ಒಬ್ಬರೇ ವಾಕ್ ಮಾಡುತ್ತಿದ್ದುದನ್ನು ಗಮನಿಸಿದ ಆರೋಪಿ, ಹಿಂದೆ ಮುಂದೆ ಯಾರೂ ಇಲ್ಲದ ಸಮಯ ನೋಡಿ ಆಕೆಯನ್ನು ಎದುರಿಸಿದ್ದಾನೆ. ಚಾಕು ತೋರಿಸಿ ಮುಖಕ್ಕೆ ಹೊಡೆದು ಮಹಿಳೆಯನ್ನು ಕೆಳಗೆ ಬೀಳಿಸಿದ ಬಳಿಕ, ಆಕೆಯ ಕುತ್ತಿಗೆಯಿಂದ ಸುಮಾರು 36 ಗ್ರಾಂ ತೂಕದ (ಸುಮಾರು 5 ಲಕ್ಷ ಮೌಲ್ಯದ) ಚಿನ್ನದ ಸರವನ್ನು ಕಸಿದುಕೊಂಡು ಕಾಡಿನೊಳಗೆ ಪರಾರಿಯಾಗಿದ್ದಾನೆ.

44
ಸೆಕ್ಷನ್ 309 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲು

ಘಟನೆಯಲ್ಲಿ ಮಹಿಳೆಯ ಕುತ್ತಿಗೆ ಹಾಗೂ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ನಂತರ ಆಕೆ ಪತಿಗೆ ವಿಷಯ ತಿಳಿಸಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಎನ್ಎಸ್ ಸೆಕ್ಷನ್ 309 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಘಟನೆಯ ಹಿನ್ನೆಲೆ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭದ್ರತೆ ದೃಷ್ಟಿಯಿಂದ ವೃಕ್ಷೋದ್ಯಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

Read more Photos on
click me!

Recommended Stories