Raichur : ಬಾಣಂತಿಯ ನಿಗೂಢ ಸಾವಿಗೆ ದೆವ್ವ ಕಾರಣ? CCTV ದೃಶ್ಯ ನೋಡಿ ಬೆಚ್ಚಿದ ಸ್ಥಳೀಯರು

Published : Mar 30, 2026, 08:56 AM IST

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ, ಐದು ದಿನದ ಮಗುವನ್ನು ಬಿಟ್ಟು ಬಾಣಂತಿಯೊಬ್ಬರು ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಹಿಂದೆ ದೆವ್ವದ ಕೈವಾಡವಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

PREV
14
ಬಾಣಂತಿ ಸಾವು

ಐದು ದಿನದ ಮಗುವನ್ನು ಬಿಟ್ಟು ಮಹಿಳೆಯೊಬ್ಬರು ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಸಾವಿಗೆ ಆಕೆಗೆ ಮೆಟ್ಟಿಕೊಂಡಿದ್ದ ದೆವ್ವ ಎಂದು ಸ್ಥಳೀಯರು ಕಥೆಯೊಂದನ್ನು ಕಟ್ಟುತ್ತಿದ್ದಾರೆ.

24
ವಾಸವಿ, ಮೃತ ಬಾಣಂತಿ

22 ವರ್ಷದ ವಾಸವಿ ಆತ್ಮ*ಹತ್ಯೆ ಮಾಡಿಕೊಂಡ ಮಹಿಳೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾಸಗಿ ಆಸ್ಪತ್ರೆ ಕಟ್ಟಡದ ಮೂರನೇ ಮಹಡಿಯಿಂದ ಜಿಗಿ9ದು ವಾಸವಿ ಪ್ರಾಣ ಕಳೆದುಕೊಂಡಿದ್ದಾರೆ. ಐದು ದಿನಗಳ ಹಿಂದೆಯಷ್ಟೇ ವಾಸವಿ ಮುದ್ದಾದ ಮಗುವಿನ ತಾಯಿಯಾಗಿದ್ದರು.

34
ಮಾನ್ವಿಯ ಖಾಸಗಿ ಆಸ್ಪತ್ರೆ

ಅನಾರೋಗ್ಯ ಕಂಡು ಬಂದ ಹಿನ್ನೆಲೆ ಮಗುವನ್ನು ಮಾನ್ವಿಯ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಾಸವಿ ಅವರೇ ಆಸ್ಪತ್ರೆಗೆ ಬಂದು ಮಗುವಿಗೆ ಹಾಲುಣಿಸಿ ಹೋಗುತ್ತಿದ್ದರು. ಮಾರ್ಚ್ 26ರಂದು ಸಹ ಮಗುವಿಗೆ ಹಾಲುಣಿಸಲು ವಾಸವಿ ಬಂದಿದ್ದರು.

ಇದನ್ನೂ ಓದಿ: ಮೆಲ್ಲಗೆ ಬರ್ತಾನೆ, ಕಾಂಪೌಂಡ್ ಹಾರ್ತಾನೆ; ಅತ್ತಿತ್ತ ನೋಡಿ ಮಹಿಳೆಯರ ಒಳಉಡುಪು ಕದಿತಾನೆ!

44
ಸಿಸಿಟಿವಿ ದೃಶ್ಯ

ಕಟ್ಟಡದ ಮೇಲ್ಭಾಗಕ್ಕೆ ವಾಸವಿ ಹೋಗುತ್ತಿರುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಸ್ಥಳೀಯರು ಇದು ದೆವ್ವದ ಕೆಲಸ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ವಾಸವಿ ಆತ್ಮ*ಹತ್ಯೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Raichur: ಜ್ವರಕ್ಕೆ ಇಂಜೆಕ್ಷನ್; ನಕಲಿ ವೈದ್ಯನ ಎಡವಟ್ಟಿಗೆ 9ನೇ ತರಗತಿ ಬಾಲಕಿ ಸಾವು!

Read more Photos on
click me!

Recommended Stories