ಮೆಲ್ಲಗೆ ಬರ್ತಾನೆ, ಕಾಂಪೌಂಡ್ ಹಾರ್ತಾನೆ; ಅತ್ತಿತ್ತ ನೋಡಿ ಮಹಿಳೆಯರ ಒಳಉಡುಪು ಕದಿತಾನೆ!

Published : Mar 30, 2026, 08:23 AM IST

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ವಿಕೃತಕಾಮಿಯೊಬ್ಬ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದಾನೆ. ಈತನ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿ ಸ್ಥಳೀಯ ಮಹಿಳೆಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

PREV
15
ಕೊಪ್ಪಳದ ಗಂಗಾವತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ವಿಕೃತಕಾಮಿ ಸುತ್ತಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಂಗಾವತಿಯ ಸಿಬಿಎಸ್ ಬಡಾವಣೆಯಲ್ಲಿ ಮಹಿಳೆಯರ ಒಳಉಡುಪುಗಳನ್ನು ಕಳ್ಳತನವಾಗುತ್ತಿವೆ.

25
ಮಹಿಳೆಯರಲ್ಲಿ ಆತಂಕ

ಸಾಮಾನ್ಯವಾಗಿ ತೊಳೆದ ಬಟ್ಟೆಗಳನ್ನು ಒಣಗಲು ಮನೆಯ ಮೇಲ್ಛಾವಣಿ ಅಥವಾ ಮುಂಭಾಗದಲ್ಲಿ ಹಾಕುತ್ತಾರೆ. ಈ ಬಟ್ಟೆಗಳಲ್ಲಿ ಮಹಿಳೆಯರ ಒಳಉಡುಪುಗಳು ಕಳ್ಳತನವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಮನೆಗಳಲ್ಲಿ ಒಂಟಿಯಾಗಿರುವ ಮಹಿಳೆಯರು ವೈರಲ್ ವಿಡಿಯೋ ನೋಡಿ ಆತಂಕಗೊಂಡಿದ್ದಾರೆ.

35
ಸಿಸಿಟಿವಿ ಕ್ಯಾಮೆರಾದಲ್ಲಿ ಚಲನವಲನ ಸೆರೆ

ಮನೆಯೊಂದರ ಮುಂಭಾಗದಲ್ಲಿ ಅಳವಡಿಸಲಾಗಿರುವ ಕಳ್ಳನ ಚಲನವಲನ ಸಂಪೂರ್ಣವಾಗಿ ಸೆರೆಯಾಗಿದೆ. ರಾತ್ರಿ 12 ರಿಂದ 1 ಗಂಟೆ ಆಸುಪಾಸಿಗೆ ಎಂಟ್ರಿ ಕೊಡುವ ವಿಕೃತ ವ್ಯಕ್ತಿ ಸದ್ದಿಲ್ಲದೇ ಕಾಂಪೌಂಡ್ ಜಿಗಿದಿದ್ದಾನೆ. ನಂತರ ಒಳಗೆ ಹೋಗಿ ಒಳಉಡುಪು ಕದ್ದು ಎಸ್ಕೇಪ್ ಆಗಿದ್ದಾನೆ.

45
ಯಾರು ಈ ವಿಕೃತಕಾಮಿ?

ಸದ್ಯ ಈ ವಿಡಿಯೋ ಸ್ಥಳೀಯಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಕೃತಕಾಮಿ ಮುಖಚಹರೆ ಸರಿಯಾಗಿ ಕಾಣಿಸಿಲ್ಲ. ಹಾಗಾಗಿ ಯಾರು ಈ ವ್ಯಕ್ತಿ? ಸ್ಥಳೀಯ ನಿವಾಸಿಯಾ ಅಥವಾ ಬೇರೆ ಪ್ರದೇಶದವನಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಡ್‌ರೂಮ್‌ಗೆ ನುಗ್ಗಿ ಮಹಿಳೆಯರ ಒಳಉಡುಪು ಧರಿಸಿ ಕುಣಿದಾಡಿದ ಸೈನಿಕರು: ವಿಡಿಯೋ ವೈರಲ್

55
ಬೆಂಗಳೂರಿನಲ್ಲಿಯೂ ಇಂಥದ್ದೇ ಘಟನೆ

ಈ ಹಿಂದೆ ಬೆಂಗಳೂರಿನ ರಾಜಗೋಪಾಲನಗರ ಮತ್ತು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹವುದೇ ಪ್ರಕರಣಗಳು ಬೆಳಕಿಗೆ ಬಂದಿದ್ದವು. ವಿಕೃತಕಾಮಿಗಳು ಲೇಡಿಸ್ ಪಿಜಿಗಳಿಗೆ ನುಗ್ಗಿ ಒಳಉಡುಪುಗಳನ್ನು ಕದಿಯುತ್ತಿದ್ದರು. ಅಪರಿಚಿತ ವ್ಯಕ್ತಿಯೋರ್ವ ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದು ಅಲ್ಲೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ರೀಲ್ಸ್‌ ಹುಚ್ಚಿಗೆ ಮಹಿಳೆಯರ ಒಳ ಉಡುಪು ಧರಿಸಿ ರಸ್ತೆಗೆ ಬಂದ! ಆಗಬಾರದ್ದು ಆಗೋಯ್ತು... ವಿಡಿಯೋ ವೈರಲ್‌

Read more Photos on
click me!

Recommended Stories