ಬೆಂಗಳೂರು( ಜು. 02) ಜೆಡಿಎಸ್ ನಾಯಕ ಟಿಎ ಶರವಣ ಮನೆಯಲ್ಲಿ ವಿನಯ್ ಗುರೂಜಿ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಂದಾಗಿದ್ದರು. ಇಂದು ನಮ್ಮ ಮನೆಯಲ್ಲಿ ಅವಧೂತ ವಿನಯ್ ಗುರೂಜಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡಿದರು ಎಂದು ಶರವಣ ವಿಚಾರ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ರಾಜಕಾರಣದ ಬೆಳವಣಿಗೆಗಳು ನಡೆಯುತ್ತಲೆ ಇದೆ. ಬಿಜೆಪಿ ಸರ್ಕಾರ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹೊಗಳಿದ್ದ ಸ್ವಾಮೀಜಿಗಳ ವಿರುದ್ಧ ಕುಮಾರಸ್ವಾಮಿ ಕೆಂಡ ಕಾರಿದ್ದರು. ಸ್ವಾಮೀಜಿಗಳು ಸರ್ಕಾರದ ಪರವಾಗಿ ಬ್ಯಾಟ್ ಬೀಸಬಾರದು ಎಂದು ಕುಮಾರಸ್ವಾಮಿ ಹೇಳಿದ್ದರು. ಶರವಣ ಮನೆಯಲ್ಲಿ ಭೇಟಿಯಾಗಿದ್ದು ರಾಜಕಾರಣದ ಆಸಕ್ತಿಗೂ ಕಾರಣವಾಯಿತು. ಕುಮಾರಸ್ವಾಮಿ ತಮ್ಮ ರಾಮನಗರದ ನಿವಾಸದಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಟ್ರ್ಯಾಕ್ಟರ್ ಖರೀದಿ ಮಾಡಿ ಅದನ್ನು ತಾವೇ ಚಲಾಯಿಸಿದ್ದರು. vinay guruji and JDS Leader hd kumaraswamy in T A Saravana House Bengaluru ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ, ಏನು ಬೆಳವಣಿಗೆ