ಬೆಂಗ್ಳೂರಿನ ಹಲವು ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು(ಜೂ.30): ನಗರದ ವಿವಿಧೆಡೆ ಅಭಿವೃದ್ಧಿಪಡಿಸಲಾದ ಹಲವು ಯೋಜನೆಗಳನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು(ಬುಧವಾರ) ಉದ್ಘಾಟಿಸಿದ್ದಾರೆ. ನಗರದ ಕನ್ನಮಂಗಲ ಸಸ್ಯ ಶಾಸ್ತೀಯ ತೋಟ, ಕನ್ನಮಂಗಲ ಕೆರೆ, 'ಕಾಡುಗೋಡಿ ಟ್ರೀ-ಪಾರ್ಕ್' ಹಾಗೂ ನಿಂಬೇಕಾಯಿಪುರದಲ್ಲಿರುವ 'ಜನಪದರು' ರಂಗಮಂದಿರವನ್ನು ಸಿಎಂ ಉದ್ಘಾಟಿಸಿದ್ದಾರೆ.

ಕನ್ನಮಂಗಲದ ಸಸ್ಯ ಶಾಸ್ತ್ರೀಯ ತೋಟವನ್ನ ಎರಡನೇ ಲಾಲ್‌ಬಾಗ್ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ನಿರ್ಮಾಣವಾಗಿರುವ ಸಸ್ಯ ಶಾಸ್ತ್ರೀಯ ತೋಟಕ್ಕೆ ಸಿಎಂ ಚಾಲನೆ ನೀಡಿದ್ದಾರೆ.
5.5 ಕೋಟಿ ರೂ. ವೆಚ್ಚದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಸಸ್ಯಶಾಸ್ತ್ರೀಯ ತೋಟದಲ್ಲಿ 3905 ವಿವಿಧ ಜಾತಿಯ ಮರಗಳಿದ್ದು, ಸಸ್ಯ ತೋಟದಲ್ಲಿ 2800 ಮೀಟರ್ ನಷ್ಟು ವಾಯುವಿಹಾರದ ಪಥ ನಿರ್ಮಾಣ

ಕನ್ನಮಂಗಲ ಕೆರೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ನಿಂಬೇಕಾಯಿಪುರದಲ್ಲಿ 'ಜನಪದರು' ರಂಗಮಂದಿರ ಉದ್ಘಾಟಿಸಿದ ಸಿಎಂ
'ಕಾಡುಗೋಡಿ ಟ್ರೀ-ಪಾರ್ಕ್' ಚಾಲನೆ ನೀಡಿದ ಬಿಎಸ್‌ವೈ

Latest Videos

click me!