8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ

Published : Sep 03, 2026, 08:43 AM IST

ವಿಜಯಪುರದ ಮನಗೂಳಿಯಲ್ಲಿ, ಲಿಂಗೈಕ್ಯರಾದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಭಕ್ತೆಯೊಬ್ಬರ ಮೂಲಕ ದೈವವಾಣಿ ನೀಡಿದ್ದರು. ಅವರ ಸೂಚನೆಯಂತೆ 8 ತಿಂಗಳ ನಂತರ ಸಮಾಧಿ ಅಗೆದು ನೋಡಿದಾಗ, ದೇಹವು ಕೊಳೆಯದೆ ಹಾಗೆಯೇ ಇದ್ದು, ಭಕ್ತರು ಅದನ್ನು ಮೆರವಣಿಗೆಯ ಮೂಲಕ ಮರು ಅಂತ್ಯಸಂಸ್ಕಾರ ಮಾಡಿದರು.

PREV
16
ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾ

ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆ ನಡೆದಿದೆ. ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಅನಾರೋಗ್ಯದಿಂದ ಬಳಲುತ್ತಿದ್ದು, 2025ರ ಡಿಸೆಂಬರ್ 31 ರಂದು ಲಿಂಗೈಕ್ಯರಾಗಿದ್ದರು. ನಂತರ 2026ರ ಜನವರಿ 1 ರಂದು ಪಟ್ಟಣದ ಚೌಕಿಮಠದ ಬಳಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

26
ಮರು ಅಂತ್ಯಕ್ರಿಯೆಗೆ ಸೂಚನೆ

ಇತ್ತೀಚೆಗೆ ಭಕ್ತೆಯೊಬ್ಬರ ಮೈಮೇಲೆ ಬಂದಿದ್ದ ಮಲ್ಲಯ್ಯ ಸರೂರ ಮುತ್ಯಾರವರು, "ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇಗುಲದ ಗದ್ದುಗೆಯ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ಮಾಡಿ" ಎಂದು ದೈವವಾಣಿಯ ಮೂಲಕ ಸೂಚನೆ ನೀಡಿದ್ದರು.

36
ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಆ ದೈವವಾಣಿಯಂತೆ ಭಕ್ತರು ಸಮಾಧಿಯನ್ನು ಅಗೆದು ನೋಡಿದಾಗ, ಎಂಟು ತಿಂಗಳು ಕಳೆದಿದ್ದರೂ ಸಮಾಧಿಯಲ್ಲಿದ್ದ ದೇಹವು ಕೊಳೆಯದೆ ನಿಷ್ಕಳಂಕವಾಗಿರುವುದು ಕಂಡುಬಂತು. ಬಳಿಕ ಭಕ್ತರು ಸಮಾಧಿಯಿಂದ ದೇಹವನ್ನು ಹೊರತೆಗೆದು, ಪಟ್ಟಣದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

46
ಅಡಿಪೋಸೈರ್ ಅಥವಾ 'ಶವದ ಮೇಣ' ರಚನೆ (Adipocere Formation)

ತೇವಾಂಶವಿದ್ದು, ಆಮ್ಲಜನಕವಿಲ್ಲದ ವಾತಾವರಣದಲ್ಲಿ ಶವ ಹೂತಾಗ ದೇಹದಲ್ಲಿರುವ ಕೊಬ್ಬಿನಂಶವು ರಾಸಾಯನಿಕ ಬದಲಾವಣೆಗೆ ಒಳಗಾಗಿ ಅಡಿಪೋಸೈರ್ (Saponification) ಎಂಬ ಮೇಣದಂತಹ ವಸ್ತುವಾಗಿ ಬದಲಾಗುತ್ತದೆ. ಇದು ದೇಹದ ಜೀವಕೋಶಗಳನ್ನು ಪ್ಲಾಸ್ಟಿಕ್‌ನಂತೆ ಮುಚ್ಚಿ, ಬ್ಯಾಕ್ಟೀರಿಯಾಗಳು ದೇಹವನ್ನು ತಿನ್ನದಂತೆ ತಡೆಯುತ್ತದೆ.

56
ನೀರಿನಾಂಶ ಸಂಪೂರ್ಣವಾಗಿ ಒಣಗಿ ಹೋಗಿದ್ರೆ!

ಅತಿಯಾದ ಶುಷ್ಕ (ಒಣ) ವಾತಾವರಣ, ಸಮಾಧಿಯಲ್ಲಿ ಹವಾಮಾನದ ತಾಪಮಾನ ಮತ್ತು ತೇವಾಂಶ ತೀರ ಕಡಿಮೆಯಿದ್ದಾಗ ದೇಹದಲ್ಲಿರುವ ನೀರಿನಾಂಶ ಸಂಪೂರ್ಣವಾಗಿ ಒಣಗಿಹೋಗುತ್ತದೆ. ನೀರಿಲ್ಲದೆ ಬ್ಯಾಕ್ಟೀರಿಯಾಗಳು ಬದುಕಲು ಸಾಧ್ಯವಾಗದೆ ದೇಹವು 'ಮಮ್ಮಿ'ಯಂತೆ ನೈಸರ್ಗಿಕವಾಗಿ ಭದ್ರವಾಗಿ ಉಳಿಯುತ್ತದೆ.

66
ಅಂತ್ಯಕ್ರಿಯೆಗೆ ಬಳಸಿದ ವಸ್ತುಗಳು

ಸಮಾಧಿ ಮಾಡಿದ ಜಾಗದ ಮಣ್ಣು ಅತಿಯಾದ ಆಮ್ಲೀಯತೆ (Acidic) ಅಥವಾ ಕ್ಷಾರೀಯತೆ (Alkaline) ಹೊಂದಿದ್ದರೆ, ಅಥವಾ ಮಣ್ಣಿನಲ್ಲಿ ಉಪ್ಪು ಮತ್ತು ಬೋರಾಕ್ಸ್‌ನಂತಹ ನೈಸರ್ಗಿಕ ಖನಿಜಗಳ ಪ್ರಮಾಣ ಹೆಚ್ಚಿದ್ದರೆ, ಅವು ವೈರಸ್-ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ತಡೆಯುತ್ತವೆ. ಅಂತ್ಯಕ್ರಿಯೆಯ ಸಮಯದಲ್ಲಿ ದೇಹಕ್ಕೆ ಬಳಸುವ ಕರ್ಪೂರ, ಗಂಧದ ನೂಲು/ಹುಡಿ, ಕಲಿಯುಗ/ಸುಣ್ಣ, ಭಸ್ಮ, ಅರಿಶಿನ, ಉಪ್ಪು ಮತ್ತು ಕೆಲವು ಸಾಂಪ್ರದಾಯಿಕ ಗಿಡಮೂಲಿಕೆಗಳು ನೈಸರ್ಗಿಕ ಕ್ರಿಮಿನಾಶಕಗಳಾಗಿ (Antiseptics) ಕೆಲಸ ಮಾಡುತ್ತವೆ. ಇವು ಸೂಕ್ಷ್ಮಜೀವಿಗಳ ಆಕ್ರಮಣವನ್ನು ನಿಧಾನಗೊಳಿಸುತ್ತವೆ.

Read more Photos on
click me!

Recommended Stories