ವಿವಿಧ ಸಂಘಟನೆಯವರು, ಮುಖಂಡರು, ಕಾರ್ಯಕರ್ತರು, ಹೋರಾಟಗಾರರು ಅಜ್ಮೀರ್ ರೈಲು ಹರಪನಹಳ್ಳಿಯಲ್ಲಿ ನಿಲುಗಡೆ ಕುರಿತು ಅರ್ಜಿ ಬರೆದು ತಂದು ಕೊಟ್ಟರೆ ನಾನು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರನ್ನು ಕಂಡು ಅರ್ಜಿ ಕೊಟ್ಟು ಮಾತನಾಡಿ, ನಿಲುಗಡೆಗೆ ಪ್ರಯತ್ನಿಸುತ್ತೇನೆ.
-ಎಂ.ಪಿ. ಲತಾ ಮಲ್ಲಿಕಾರ್ಜುನ, ಶಾಸಕರು, ಹರಪನಹಳ್ಳಿ
ಹರಪನಹಳ್ಳಿ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ತಾಲೂಕು, ಬ್ರಿಟಿಷರ ಕಾಲದಲ್ಲಿಯೇ ತಾಲೂಕು ಕೇಂದ್ರವಾಗಿದೆ. ಪ್ರಯಾಣಿಕರ ಸಂಖ್ಯೆ ಸಹ ಹೆಚ್ಚು ಇದೆ. ಆದ್ದರಿಂದ ಮೈಸೂರು -ಅಜ್ಮೀರ್ ರೈಲನ್ನು ಹರಪನಹಳ್ಳಿಯಲ್ಲಿ ನಿಲುಗಡೆ ಮಾಡಬೇಕು. ಈ ಬಗ್ಗೆ ವಿವಿಧ ಸಂಘಟನೆಯವರು ಚರ್ಚಿಸಿ ಶೀಘ್ರ ಹೋರಾಟ ಹಮ್ಮಿಕೊಳ್ಳುತ್ತೇವೆ.
-ಗುಡಿಹಳ್ಳಿ ಹಾಲೇಶ, ಕಿಸಾನ್ ಸಭಾ ಜಿಲ್ಲಾಧ್ಯಕ್ಷ, ಹರಪನಹಳ್ಳಿ