ಶಿರಸಿ(ಮಾ. 28) ಉತ್ತರ ಕನ್ನಡ ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಹೋಳಿಯನ್ನು ಸಂಭ್ರಮಿಸಿದ್ದಾರೆ. ಅಭಿಮಾನಿಗಳೊಂದಿಗೆ ಹೆಗಡೆ ಸಮಯ ಕಳೆದಿದ್ದಾರೆ. ಪ್ರತಿ ವರ್ಷವೂ ಅನಂತ್ ಕುಮಾರ್ ಹೆಗಡೆ ಹೋಳಿ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಶಿರಸಿಯ ವಿವೇಕಾನಂದನಗರ ನಿವಾಸಿಗಳೊಂದಿಗೆ ಬೆರೆತ ಹೆಗಡೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಪರಸ್ಪರ ಬಣ್ಣ ಎರಚಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದರು. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಹೆಗಡೆ ಈಗ ಚೇತರಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ ಸಾಧಿಸಿದ್ದರು. Uttara Kannada BJP MP formar Union Minister Anant Kumar Hegde celebrates holi Sirsi ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹೋಳಿ ಸಂಭ್ರಮ