ಕೊಲ್ಲೂರು ದೇಗುಲ; ಹುಂಡಿ ಎಣಿಕೆಯಲ್ಲಿ ಸರ್ವಕಾಲಿಕ ದಾಖಲೆ; ಹಣ, ಚಿನ್ನ, ಬೆಳ್ಳಿ ಅರ್ಪಣೆ

Published : May 27, 2026, 08:34 AM IST

ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮೇ ತಿಂಗಳ ಹುಂಡಿ ಎಣಿಕೆಯಲ್ಲಿ ಸರ್ವಕಾಲಿಕ ದಾಖಲೆ ಕಾಣಿಕೆ ಸಂಗ್ರಹವಾಗಿದೆ. ನಗದು ಜೊತೆಗೆ, ಭಕ್ತರು ಚಿನ್ನ ಮತ್ತು ಬೆಳ್ಳಿಯನ್ನು ಸಹ ಅರ್ಪಿಸಿದ್ದಾರೆ. 

PREV
13
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ ಕಾರ್ಯ

ಉಡುಪಿ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ತಿಂಗಳ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆಯಿತು. ದೇವಸ್ಥಾನದ 41 ಹುಂಡಿಗಳನ್ನು ತೆರೆಯಲಾಗಿದ್ದು, ಮೇ ತಿಂಗಳಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

23
ಇದುವರೆಗಿನ ಸರ್ವಾಧಿಕ ದಾಖಲೆ

ದೇವಸ್ಥಾನ ಮೂಲಗಳ ಪ್ರಕಾರ, ಹುಂಡಿಗಳಲ್ಲಿ ಒಟ್ಟು 1,90,43,819 ರು. ನಗದು ಲಭಿಸಿದೆ. ಇತರೆ ಕಾಣಿಕೆಗಳು ಸೇರಿ ಒಟ್ಟು 1,94,44,173 ರು. ಸಂಗ್ರಹವಾಗಿದ್ದು, ಇದು ಇದುವರೆಗಿನ ಸರ್ವಾಧಿಕ ದಾಖಲೆ ಮೊತ್ತವಾಗಿದೆ. ಇದಲ್ಲದೆ ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದ 0.325 ಗ್ರಾಂ ಚಿನ್ನ ಹಾಗೂ 2.370 ಕೆ.ಜಿ ಬೆಳ್ಳಿಯೂ ಲಭ್ಯವಾಗಿದೆ.

33
ದಾಖಲೆ ಮೊತ್ತದ ಕಾಣಿಕೆ ಸಂಗ್ರಹ

ಪ್ರತಿ ತಿಂಗಳು ಸರಾಸರಿ 1.25 ಕೋಟಿ ರು.ಗಳಷ್ಟು ಕಾಣಿಕೆ ಸಂಗ್ರಹವಾಗುತಿತ್ತು, ಆದರೇ ಈ ತಿಂಗಳಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಕ್ರಮಗಳೊಂದಿಗೆ ನಡೆಯಿತು. ಈ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಲ್ಲದೆ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಸಂಗ್ರಹದಲ್ಲೂ ನಿರಂತರ ಏರಿಕೆ ಕಂಡುಬರುತ್ತಿದೆ.

Read more Photos on
click me!

Recommended Stories