ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ, ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅರಿವಳಿಕೆ ಔಷಧಿಯ ಅಧಿಕ ಡೋಸ್ ನೀಡಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ಸಂಬಂಧದ ಹಿನ್ನೆಲೆಯಲ್ಲಿ, ಗೂಗಲ್‌ನಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯ ಮಾರತ್ತಹಳ್ಳಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಾಕ್ಟರ್ ಕೃತಿಕಾ ರೆಡ್ಡಿ ಅವರ ಸಾವು ಸಾಮಾನ್ಯ ಸಾವಲ್ಲ, ಬದಲಿಗೆ ಆಕೆಯ ಪತಿ, ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ನಡೆಸಿದ ವ್ಯವಸ್ಥಿತ ಕೊಲೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ (FSL) ವರದಿ ಬಳಿಕ ಈ ಪ್ರಕರಣದ ದಿಕ್ಕು ಬದಲಾಯಿತು. ಕೃತಿಕಾ ಮೃತಪಟ್ಟ ನಂತರವೂ ಮಹೇಂದ್ರ ರೆಡ್ಡಿ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದುದು ಮತ್ತು ಪೇ-ಟಿಎಂ ಬಳಸುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಪುರಾವೆಗಳು ಲಭ್ಯವಾಗಿದೆ.
27
ಮಹೇಂದ್ರ ಕೊಲೆ ಮಾಡಿದ್ದಕ್ಕೆ ಪ್ರಮುಖ ಸಾಕ್ಷಿಗಳು ಪತ್ತೆ
ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪವೊಡ್ಡಿ, ಇಂಟ್ರಾವೀನಸ್ (IV) ಮೂಲಕ ಅತಿಯಾದ ಡೋಸ್ ಅರವಳಿಕೆ (ಅನಸ್ತೇಶಿಯಾ) ನೀಡಿ ಈತ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಸದ್ಯ ಮರತ್‌ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ನ್ಯಾಯಾಲಯಕ್ಕೆ 1200 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಸೆಷನ್ಸ್ ನ್ಯಾಯಾಲಯವು ಈಗಾಗಲೇ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ ಕೊಲೆಗೆ ಡಾ ಮಹೇಂದ್ರ ನಿಂದ ಖತರ್ನಾಕ್ ಪ್ಲಾನ್ ಬಹಿರಂಗವಾಗಿದೆ.
37
ಗೂಗಲ್‌ನಲ್ಲಿ 'ಡೆಡ್ಲಿ ಪ್ಲಾನ್' ಹುಡುಕಿದ್ದ ಹಂತಕ ವೈದ್ಯ!
ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿಯನ್ನು ಕೊಲ್ಲಲು ಇಂಟರ್ನೆಟ್ ಅನ್ನು ಹೇಗೆ ಬಳಸಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಔಷಧಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಮಹೇಂದ್ರ ರೆಡ್ಡಿ ಕೇವಲ ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕಾಗಿದ್ದ 'ಪ್ರೊಪೋಫಾಲ್' (Propofol) ಎಂಬ ಅರವಳಿಕೆ ಔಷಧಿಯನ್ನು ತಾನು ವೈದ್ಯನೆಂಬ ಕಾರಣಕ್ಕೆ ಸುಲಭವಾಗಿ ಖರೀದಿಸಿದ್ದ.
ಈ ಔಷಧಿ ಹೇಗೆ ಕೆಲಸ ಮಾಡುತ್ತದೆ? ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀಡಬೇಕು? ಮತ್ತು ಎಷ್ಟು ದಿನಗಳ ಕಾಲ ನಿರಂತರವಾಗಿ ನೀಡಿದರೆ ವ್ಯಕ್ತಿ ಸಾವನ್ನಪ್ಪುತ್ತಾನೆ? ಎಂಬುದರ ಬಗ್ಗೆ ಈತ ಗೂಗಲ್‌ನಲ್ಲಿ ತೀವ್ರವಾಗಿ ಸರ್ಚ್ ಮಾಡಿದ್ದ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ. ಕೇವಲ ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಬಳಸಬೇಕಾಗಿದ್ದ ಆ ಅನಸ್ತೇಶಿಯಾವನ್ನು ಓವರ್ ಡೋಸೇಜ್ ನಲ್ಲಿ ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಟ್ಟಿದ್ದ
57
ಡಬಲ್ ಡೋಸ್ ಇಂಜೆಕ್ಷನ್
ಕೃತಿಕಾ ಅವರ ದೇಹದ ತೂಕಕ್ಕೆ ಕೇವಲ 7 ರಿಂದ 8 ಎಂಎಲ್ (ML) ಅನಸ್ತೇಶಿಯಾ ನೀಡಬೇಕಿತ್ತು. ಆದರೆ ಮಹೇಂದ್ರ ರೆಡ್ಡಿ ಗೂಗಲ್ ನಲ್ಲಿ ಆತ ಪಡೆದ ಮಾಹಿತಿಯ ಆಧಾರದ ಮೇಲೆ ಆಕೆಗೆ ಬರೋಬ್ಬರಿ 15 ಎಂಎಲ್‌ನಷ್ಟು ಅತಿಯಾದ ಡೋಸ್ ನೀಡಿ ಉಸಿರುಗಟ್ಟುವಂತೆ ಮಾಡಿ ಕೊಂದಿದ್ದಾನೆ. ಬಳಿಕ ಆತ ತನ್ನ ಪ್ರಿಯತಮೆಗೆ "ನಾನೇ ಆಕೆಯನ್ನು ಕೊಂದಿದ್ದೇನೆ" ಎಂದು ಒಪ್ಪಿಕೊಂಡಿರುವ ವಾಟ್ಸಾಪ್ ಸಂದೇಶ ಪತ್ತೆಯಾಗಿದೆ.
67
ಕೊಲೆ ರಹಸ್ಯ ಬಯಲು ಮಾಡಿದ 6 ಪ್ರಮುಖ ಸಾಕ್ಷಿಗಳು:
ಆರಂಭದಲ್ಲಿ ಇದನ್ನು ಕಾಯಿಲೆಯಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಮಹೇಂದ್ರ ರೆಡ್ಡಿ ಪ್ರಯತ್ನಿಸಿದ್ದ. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳು ಪ್ರಕರಣದ ದಿಕ್ಕನ್ನೇ ಬದಲಿಸಿದವು. ಪೊಲೀಸರು ಕಲೆಹಾಕಿದ ಪ್ರಮುಖ ಸಾಕ್ಷಿಗಳು ಹೀಗಿವೆ:
1. ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ ಪತ್ತೆ
2. ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ
3. ಮೊಬೈಲ್ ನಲ್ಲಿ ಕೊಲೆ ಮಾಡಿದ ಬಳಿಕ ಓರ್ವರಿಗೆ ಚಾಟ್ ಮಾಡಿದ್ದ
4. ಚಾಟ್ ಮಾಡಿದ್ದು ಡೇಟಾರ ರೀಟ್ರೀವ್ ವೇಳೆ ಪತ್ತೆ
5. ತಾನೇ ಕೊಂದಿರೋದಾಗಿ ಪ್ರಿಯತಮೆಗೆ ಮೆಸೇಜ್
6.ಅನಸ್ತೇಶಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿರೋದು ಪತ್ತೆ
77
ಪರಸ್ತ್ರೀ ಸಂಬಂಧ
ಈ ಕೊಲೆಯ ಹಿಂದೆ ಆರೋಪಿ ವೈದ್ಯನ ಪರಸ್ತ್ರೀ ಸಂಬಂಧವೇ ಮುಖ್ಯ ಕಾರಣ ಎಂಬುದು ಸಾಬೀತಾಗಿದೆ. ವೈದ್ಯಕೀಯ ವೃತ್ತಿ ಧರ್ಮಕ್ಕೆ ದ್ರೋಹ ಬಗೆದು, ಪ್ರಾಣ ರಕ್ಷಿಸಬೇಕಾದ ಇಂಜೆಕ್ಷನ್ ಅನ್ನೇ ಪ್ರಾಣ ತೆಗೆಯಲು ಬಳಸಿದ ಈ ಕಾಮುಕ ಹಾಗೂ ಕ್ರೂರಿ ವೈದ್ಯನಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಭದ್ರವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿದ್ದಾರೆ.