ನಟ ಡಾ. ಶಿವ ರಾಜ್‌ಕುಮಾರ್ ಬಳಿಯೇ ಪಟಾಕಿ ಸ್ಫೋಟ ಮಾಡಿ ಆತಂಕ ಸೃಷ್ಟಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇದರಿಂದ ಕೆಲ ಕ್ಷಣಗಳು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟಕ್ಕೂ ಕೋಟೆ ನಾಡಲ್ಲಿ ಆಗಿದ್ದೇನು? ಸ್ಟೋರಿ ಓದಿ.
ಚಿತ್ರದುರ್ಗ: ಡಾ.ಶಿವ ರಾಜ್‌ಕುಮಾರ್ ಅಭಿನಯದ 'ಬೇಲ್' ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್‍ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಶಿವಣ್ಣ ಅವರು ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಟಾಕಿ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿದೆ.
25
ಆಗಿದ್ದೇನು?
ಬೇಲ್ ಸಿನಿಮಾದ ಪ್ರಚಾರ ಹಿನ್ನೆಲೆಯಲ್ಲಿ ಶಿವಣ್ಣ ಇವತ್ತು ಕೋಟೆನಾಡಿಗೆ ಭೇಟಿ ನೀಡಿದ್ದರು. ಶಿವಣ್ಣ ಅವರು ನಗರದ ಖಾಸಗಿ ಶೋ ರೂಮ್ ಬಳಿ ತಮ್ಮ ಸಿನಿಮಾ ಕುರಿತು ಸುದ್ದಿಗೋಷ್ಟಿ ನಡೆಸಲಿದ್ದರು. ಖಾಸಗಿ ಶೋ ರೂಮ್‌ಗೆ ಎಂಟ್ರಿ ಆಗ್ತಿದ್ದಂತೆಯೇ ಅವರ ಬಳಿಯೇ ಪಟಾಕಿ ಸ್ಫೋಟಗೊಂಡಿದೆ. ಅಭಿಮಾನಿಗಳು ಪಟಾಕಿ ಸ್ಫೋಟ ಮಾಡುತ್ತಿದ್ದಂತೆಯೇ ಅಲ್ಲಿದ್ದ ಗಣ್ಯರಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಶಿವಣ್ಣ ಕೂಡ ಒಂದು ಕ್ಷಣ ಶಾಕ್‌ಗೆ ಒಳಗಾದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
35
ಸುದ್ದಿಗೋಷ್ಟಿಯಲ್ಲಿ ಶಿವಣ್ಣ ಮಾತು..
ಇನ್ನು ಸುದ್ದಿಗೋಷ್ಟಿಯಲ್ಲಿ ತಮ್ಮ ಬೇಲ್ ಚಿತ್ರದ ಬಗ್ಗೆ ಮಾತನ್ನಾಡಿ.. ಬೇಲ್ ಸಿನೆಮಾ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ಬೇಲ್ ಮೂವಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನೆಮಾ ಆಗಿದೆ. ಎಲ್ಲಾ ಸಿನೆಮಾಗಳು ಸಿನೆಮಾಗಳು ಅಷ್ಟೇ. ಬಿಗ್ ಬಜೆಟ್, ಸ್ಮಾಲ್ ಬಜೆಟ್ ಸಿನೆಮಾ ಎಂಬುದು ಇಲ್ಲ. ಸಿನಿಮಾ ಸಿನಿಮಾ ಅಷ್ಟೇ. ಬಿಗ್ ಬಜೆಟ್ ಹಾಕಿ ಸಿನಿಮಾ ಮಾಡಿದರೆ ಅದು ಓಡುತ್ತದೆ ಅನ್ನೋದೆಲ್ಲ ಸುಳ್ಳು. ಸಿನಿಮಾದ ಕತೆಯು ವೀಕ್ಷಕರನ್ನು ಆಕರ್ಷಿಸಬೇಕು ಎಂದರು.
ಇದೇ ವೇಳೆ ಪ್ರೇಮದ ಊರಲ್ಲಿ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ.. ಈಗ ಬೇಲ್ ಸೇರಿ ಕೆಲ ಸಿನಿಮಾ ಜನರನ್ನು ಸೆಳೆದಿವೆ. ಜನರಿಗೆ ಸಬ್ಜೆಕ್ಟ್ ಅರ್ಥ ಆಗಬೇಕು, ಫ್ಯಾಮಿಲಿ ಜತೆ ನೋಡಬೇಕು. ಒಂದೊಂದ್ಸಲ ಒಳ್ಳೆಯ ಸಿನೆಮಾಗಳೇ ಓಡಲ್ಲ, ಏನೂ ಮಾಡೋಕಾಗಲ್ಲ. ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ. ಭ್ರಮೆಯಲ್ಲಿ ಬದುಕಬಾರದು, ರಿಯಾಲಿಯಲ್ಲಿ ಬದುಕಬೇಕು. ಸಿನಿಮಾ ಸರಳವಾಗಿ ಅರ್ಥ ಆಗುವಂತೆ ಇರಬೇಕು ಎಂದು ಪ್ರತಿಪಾದಿಸಿದ್ದಾರೆ.
55
ಅಕ್ಟೋಬರ್ 2 ರಂದು ರಿಲೀಸ್
ಬೇಲ್ ಚಿತ್ರದಲ್ಲಿ ಶಿವಣ್ಣ ಅವರು ನಿವೃತ್ತ ಪೊಲೀಸ್ ಆಯುಕ್ತರಾಗಿ ಶಾಂತ, ಗಂಭೀರ ಅಭಿನಯ ಮಾಡಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸಲು ಕಾನೂನನ್ನು ಕೈಗೆತ್ತಿಕೊಳ್ಳುವ ಕಥೆ ಪ್ರೇಕ್ಷಕರನ್ನು ಮನ ತಟ್ಟುತ್ತದೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಹೊಸ ಲುಕ್‌ನಲ್ಲಿ ಶಿವಣ್ಣನ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಗಾಂಧಿ ಜಯಂತಿ ದಿನ ಅಂದರೆ ಅಕ್ಟೋಬರ್ 2 ರಂದು ಸಿನಿಮಾ ರಿಲೀಸ್ ಆಗಿದೆ.