ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಗ್ಗೆ ಹೈಕೋರ್ಟ್ ಹಲವು ದಿನಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುತ್ತಲೇ ಇದೆ. ಆದರೂ ಸಹ ಬಿಬಿಎಂಪಿ ಕೈಕಟ್ಟಿ ಕುಳಿತುಕೊಂಡಿದೆ. ಇದೀಗ ಹಲವೆಡೆ ಟ್ರಾಫಿಕ್ ಪೊಲೀಸರೇ ರಸ್ತೆಗುಂಡಿಗಳನ್ನ ಮುಚ್ಚುತ್ತಿದ್ದಾರೆ.