ಮಾರ್ಕೋನಹಳ್ಳಿ ಬಳಿಕ ತುಮಕೂರಿನ ತೀತಾ ಡ್ಯಾಮ್‌ ಕೂಡ ಭರ್ತಿ, ರೈತರ ಸಂತಸ ಇಮ್ಮಡಿ

First Published | Oct 23, 2024, 5:53 PM IST

ನಿರಂತರ ಮಳೆಯಿಂದಾಗಿ ತುಮಕೂರಿನ ತೀತಾ ಕಿರು ಜಲಾಶಯ ಭರ್ತಿಯಾಗಿದ್ದು, ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾದ ಬೆನ್ನಲ್ಲೇ ತೀತಾ ಜಲಾಶಯ ಕೂಡ ಭರ್ತಿಯಾಗಿದ್ದು, ಒಂದೇ ವರ್ಷದಲ್ಲಿ ಎರಡು ಬಾರಿ ಈ ಜಲಾಶಯ ಭರ್ತಿಯಾಗಿದೆ.

ಒಂದೆಡೆ ಬೆಂಗಳೂರಿನ ಜನರು ನಿರಂತರ ಮಳೆಗೆ ಹೈರಾಣಾಗಿದ್ದರೆ, ಪ್ರತಿ ಬಾರಿ ಬೇಸಿಗೆಯಲ್ಲಿ ನೀರಿನ ವಿಚಾರದಲ್ಲಿ ಕಂಗಾಲಾಗುತ್ತಿದ್ದ ತುಮಕೂರಿಗೆ ಈ ಮಳೆಗಾಲ ಹರ್ಷ ನೀಡಿದೆ.
 

ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಐದು ದಿನಗಳಾದ ಬೆನ್ನಲ್ಲಿಯೇ ತುಮಕೂರಿನ ಇನ್ನೊಂದು ಕಿರು ಜಲಾಶಯ ಭರ್ತಿಯಾದ ಸುದ್ದಿ ಜನರಿಗೆ ಸಿಕ್ಕಿದೆ.
 

Latest Videos


ಮಾರ್ಕೋನಹಳ್ಳಿ ಜಲಾಶಯ ಕಳೆದ ಶುಕ್ರವಾರ ಭರ್ತಿಯಾಗಿ ಅಲ್ಲಿದ್ದ 2 ಸ್ವಯಂಚಾಲಿನ ಸೈಫನ್‌ ಓಪನ್‌ ಆಗಿತ್ತು. ಈಗ ನಿರಂತರ ಮಳೆಯಿಂದ ಜಿಲ್ಲೆಯ ಇನ್ನೊಂದು ಜಲಾಶಯ ಕೂಡ ತುಂಬಿ ಹರಿದಿದೆ.
 

ನಿರಂತರ ಮಳೆಯಿಂದ ಭರ್ತಿಯಾದ ಕೊರಟಗೊರೆ ತಾಲೂಕಿನ ಗೊರವನಹಳ್ಳಿ ಸಮೀಪದ ತೀತಾ ಕಿರು ಜಲಾಶಯ ಭರ್ತಿಯಾಗಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ತೀತಾ ಡ್ಯಾಮ್‌ ಭರ್ತಿಯಾಗಿದೆ
 

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರನವಹಳ್ಳಿ ಬಳಿ ಇರುವ ತೀತಾ ಜಲಾಶಯವನ್ನು  ಜಯಮಂಗಲಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
 

ಮಂಗಳವಾರ ಬೆಳಗ್ಗೆಯಿಂದ ತೀತಾ ಕಿರು ಜಲಾಶಯ ತುಂಬಿ ಹರಿಯುತ್ತಿದೆ. ನಿರಂತರ ಮಳೆಯಿಂದ ಜಯಮಂಗಲಿ ನದಿಗೆ ಜೀವ ಕಳೆ ಬಂದಿದೆ. ಇದು ಜಿಲ್ಲೆಯ ರೈತರ ಸಂತಸ ಇಮ್ಮಡಿಯಾಗಲು ಕಾರಣವಾಗಿದೆ.
 

ಕಳೆದ ಒಂದು ವಾರದಿಂದ ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿದೆ. ಇದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.
 

ಜಯಮಂಗಲಿ ನದಿಯ ನೀರು ಪ್ರವಾಹದ ರೀತಿಯಲ್ಲಿ ಡ್ಯಾಂಗೆ ಬಂದು ಸೇರುತ್ತಿದೆ ಪರಿಣಾಮ ಡ್ಯಾಂ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಡ್ಯಾಮ್‌ ವೈಭವ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 
 

ಹೆಚ್ಚಿದ ಹೊರ ಹರಿವಿನಿಂದಾಗಿ ನದಿ ಪಾತ್ರದ ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜಮೀನುಗಳಿಗೆ ಹಾಗೂ ನದಿಪಾತ್ರದ ಮನೆಗಳಿಗೆ ನೀರು ನುಗ್ಗುವ ಅಪಾಯ ಈ ವೇಳೆ ಇರುತ್ತದೆ.

 ತೀತಾ ಜಲಾಶಯದ ಕ್ರಸ್ಟ್‌ ಗೇಟ್‌ಅನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಗೇಟ್‌ಗಳು ಓಪನ್‌ ಆಗಿರುವ ಕಾರಣ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ.
 

click me!