ಚಿಕ್ಕಮಗಳೂರು: ಗೋಶಾಲೆಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಾರದ ಅನುದಾನ!
First Published | Oct 18, 2024, 10:13 PM ISTವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.18): ಗೋವನ್ನ ವಿಶ್ವಮಾತೆ ಅಂತಾರೆ. ಗೋವುಗಳು ರಾಷ್ಟ್ರೀಯ ಸಂಪತ್ತು. ಅವುಗಳನ್ನ ಉಳಿಸಬೇಕು ಅನ್ನೋದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಾದ. ಗೋವುಗಳನ್ನ ಗೋ ಶಾಲೆಯಲ್ಲಿ ಸಾಕೋಕೆ. ಬಿಡಾಡಿ ದನಗಳಾಗಿ ರಸ್ತೆಯಲ್ಲಿ ನಾನಾ ಸಮಸ್ಯೆ ಉಂಟು ಮಾಡೋದು ಬೇಡ. ಗೋ ಹಂತಕರ ಕೈಗೆ ಸಿಗದಂತೆ ಕಾಪಾಡಲು ಕಳೆದ ಬಿಜೆಪಿ ಅವಧಿಯಲ್ಲಿ ಸರ್ಕಾರವೇ ಗೋಶಾಲೆ ತೆರೆದು, ಖಾಸಗಿಯವ್ರಿಗೂ ಅನುಮತಿ ನೀಡಿತ್ತು. ಗೋಶಾಲೆಗನ್ನ ರಿಜಿಸ್ಟರ್ ಕೂಡ ಮಾಡಲಾಯ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಳು ಗೋಶಾಲೆಗಳು ನೋಂದಣಿಯಾಗಿವೆ. ಇಲ್ಲಿ ನೂರಾರು ಗೋವುಗಳನ್ನ ಸಾಕಲಾಗ್ತಿದೆ. ಗೋವುಗಳ ನಿರ್ವಹಣೆಗೆಂದೇ ಸರ್ಕಾರ ಒಂದು ಗೋವಿಗೆ ದಿನಕ್ಕೆ 17 ರೂಪಾಯಿಯಂತೆ ನಿಗದಿ ಮಾಡ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ಕೂಡ ಬಂತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋವುಗಳ ನಿರ್ವಹಣೆಯ ಹಣವೇ ಬಂದಿಲ್ಲ.