ಗುಡ್ಡ ಕುಸಿದ ಪರಿಣಾಮ ಬ್ರಹ್ಮಗಿರಿ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಆದ್ರೆ, ಇವರ ಮಕ್ಕಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿದ್ದಾರೆ. ಅವತ್ತು ಅತ್ತೆಗೆ ಪರಿಹಾರ ಹಣ ಕೊಟ್ಟಿದ್ದಕ್ಕೆ ಗಲಾಟೆ ಮಾಡಿದ್ರು. ಇವತ್ತು ಮತಾಂತರವಾಗಿರೋ ವಿಷಯ ಬೆಳಕಿಗೆ ಬಂದಿದೆ.
ಆಗಸ್ಟ್ 5ರಂದು ಗುಡ್ಡ ಕುಸಿದ ಪರಿಣಾಮ ಬ್ರಹ್ಮಗಿರಿ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದು, ಮಕ್ಕಳಿಬ್ಬರಿಗೆ ಪರಿಹಾರದ ಹಣ ಪಡೆಯಲು ಮತಾಂತರ ಅಡ್ಡಿಯಾಗಿದೆ.
ಇವರು ವಿದೇಶದಲ್ಲಿ ಬೇರೆ ಧರ್ಮಕ್ಕೆ ಮತಾಂತರವಾಗಿರುವುದೇ ಪರಿಹಾರ ಹಣ ಪಡೆಯಲು ಸಮಸ್ಯೆ ಎದುರಾಗಿದೆ.
ಈ ಹೆಣ್ಣು ಮಕ್ಕಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿದ್ದಾರೆ. ಅವತ್ತು ಅತ್ತೆಗೆ ಪರಿಹಾರ ಹಣ ಕೊಟ್ಟಿದ್ದಕ್ಕೆ ಗಲಾಟೆ ಮಾಡಿದ್ರು
ಆ.15ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಇಬ್ಬರು ಪುತ್ರಿಯರಿಗೆ ತಲಾ 2.50 ಲಕ್ಷ ರೂ ಚೆಕ್ ನೀಡಿದ್ದರು.
ನಮ್ಮ ಇಬ್ಬರ ಹೆಸರು ಬದಲು ಮಾಡಬೇಕೆಂದು ಅರ್ಚಕರು ಪುತ್ರಿಯರು ಪರಿಹಾರದ ಚೆಕ್ ಭಾಗಮಂಡಲದ ನಾಡ ಕಚೇರಿಗೆ ವಾಪಸ್ ಮಾಡಿದ್ದು, ಫರ್ನಾಂಡೀಸ್ ಮತ್ತು ನಮಿತಾ ನಜೇರತ್ ಎಂಬ ಹೆಸರಿನಲ್ಲಿ ಚೆಕ್ ಕೊಡಿ ಎಂದು ಕೋರಿದ್ದಾರೆ.
ಇದಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಚೆಕ್ ತಡೆ ಹಿಡಿದಿದ್ದು, ಹೆಸರು ಬದಲಾವಣೆ ಮಾಡಿಕೊಂಡಿರುವುದಕ್ಕೆ ಸೂಕ್ತ ದಾಖಲೆ ಕೇಳಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಅರ್ಚಕರ ಮಕ್ಕಳಾದಿದ್ದವರು ವಿದೇಶಕ್ಕೆ ಹೋಗಿ ಅಲ್ಲಿ ಬೇರೆ ಧರ್ಮಕ್ಕೆ ಮತಾಂತರವಾಗಿರುವುದು ಬೆಳಕಿಗೆ ಬಂದಿದೆ.