ಮಂಗಳವಾರ ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ ವ್ಯಾಪ್ತಿಯ ಮದಗಮಾಸೂರು ಕೆರೆ (ಕೆಂಚಮ್ಮನ ಕೆರೆ)ಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, 2018-19 ಸಾಲಿನಲ್ಲಿ ಎಡಬಲದಂಡೆಗೆ 25 ಕೋಟಿ ಅಭಿವೃದ್ಧಿಗೆ ಇಡಲಾಗಿತ್ತಾದರೂ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ. 5 ಕೋಟಿ ಅನುದಾನದಲ್ಲಿ ಕೆರೆಯ ಹೂಳು ತೆಗೆಯುವುದು, ಎಡ ಬಲ ದಂಡೆಗಳನ್ನು ನವೀಕರಿಸಿ ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಪ್ರತಿವರ್ಷ ತಾವು ಹಾಗೂ ಯು.ಬಿ. ಬಣಕಾರ ಪ್ರತ್ಯೇಕವಾಗಿ ಬಾಗಿನ ಬಿಡುತ್ತಿದ್ದೆವು. ದೇವರ ದಯೆಯಿಂದ ಈ ಬಾರಿ ಕೃಷಿ ಸಚಿವನಾಗುವ ಸೌಭಾಗ್ಯ ದೊರೆತಿದ್ದು, ಇಬ್ಬರೂ ಸೇರಿ ಕೆಂಚಮ್ಮನ ಕೆರೆಗೆ ಬಾಗಿನ ಅರ್ಪಿಸಿದ್ದೇವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ ಸಚಿವ ಬಿ.ಸಿ.ಪಾಟೀಲ
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ನದಿ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಬಾಗಿನ ಅರ್ಪಿಸುವುದು ನಮ್ಮ ಸಂಪ್ರದಾಯ. ನಮ್ಮ ಭಾಗದ ಕುಮದ್ವತಿ ನದಿಯು ಭಾಗದ ರೈತರು ಸರ್ವಜನರ ಜೀವನದಿಯಾಗಿದ್ದು ಅದೊಂದು ಕಾಮಧೇಮನುವಾಗಿದೆ. ಜೀವನ ಸುಗಮವಾಗಿ ಸಾಗುವ ದಿಕ್ಕಿನಲ್ಲಿ ನದಿ ನೀರಿನ ಪಾತ್ರ ಮಹತ್ವದ್ದು ಈ ಬಾಗಿನ ಅರ್ಪಿಸುವದರ ಜತೆಗೆ ಮದಗ ಮಾಸೂರು ಕೆರೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಎಡದಂಡೆ, ಬಲದಂಡೆ ಕಾಲುವೆಗಳ ಆಧುನೀಕರಣ ಮಾಡುವ ದಿಕ್ಕಿನಲ್ಲಿ ಕೃಷಿ ಸಚಿವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಮಠದ ವಿರೂಪಾಕ್ಷ ಸ್ವಾಮೀಜಿ, ಜಿಪಂ ಸದಸ್ಯೆ ಸುಮಿತ್ರಾ ಪಾಟೀಲ, ಹಿರೇಕೆರೂರು ತಾಪಂ ಅಧ್ಯಕ್ಷ ರಾಜು ಬಣಕಾರ, ರಟ್ಟಿಹಳ್ಳಿ ತಾಪಂ ಅಧ್ಯಕ್ಷ ಡಿಳ್ಳೆಪ್ಪ ಹಳ್ಳಳ್ಳಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಆರ್.ಎನ್. ಗಂಗೋಳ, ಧಾರವಾಡ ಕೆಎಂಎಫ್ ನಿರ್ದೇಶಕರಾದ ಹನುಮಂತಗೌಡ ಬರಮಣ್ಣನವರ, ಹೆಸ್ಕಾಂ ಎಂಜಿನಿಯರ್ ರಾಜು ಮರಿಗೌಡರ, ಸಿಪಿಐ ಮಂಜುನಾಥ ಪಂಡಿತ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆನಂದ ಹಾದಿಮನಿ, ಪಿಡಬ್ಲ್ಯೂಡಿ ಎಂಜಿನಿಯರ್ ಎಸ್.ವಿ. ಪುರಾಣಿಕ, ಷಣ್ಮುಖ ಮಳಿಮಠ, ದೇವರಾಜ ನಾಗಣ್ಣನವರ, ಗಣೇಶ ವೆರಣಿಕರ್, ಎಸ್.ಬಿ.ಪಾಟೀಲ ಉಪಸ್ಥಿತರಿದ್ದರು.