Weather Forecast: ಕೆಲ ದಿನಗಳಲ್ಲಿ ಬದಲಾಯಿತು ದಕ್ಷಿಣ ಭಾರತ ಹವಾಮಾನ, ಇಸ್ರೋ ಉಪಗ್ರಹ ಫೋಟೋ ಬಿಚ್ಚಿಟ್ಟ ಅಚ್ಚರಿ ಸಂಗತಿ

Published : Sep 28, 2026, 12:07 PM IST

ನೈಋತ್ಯ ಮುಂಗಾರು ಮಾರುತಗಳು ವಿರಳವಾಗುತ್ತಿದ್ದು, ಪಶ್ಚಿಮ ರಾಜಸ್ಥಾನದಿಂದ ಮುಂಗಾರು ಹಿಂತೆಗೆತ ಬಹುಬೇಗ ಆರಂಭವಾಗಿದೆ. ಆದರೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್ 28ರಿಂದ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ.

PREV
15
ಮುಂಗಾರು ನಿರ್ಗಮನದ ನಡುವೆ ಹವಾಮಾನದಲ್ಲಿ ಅಚ್ಚರಿಯ ಬದಲಾವಣೆ!

ನೈಋತ್ಯ ಮಾನ್ಸೂನ್ ಮಾರುತಗಳು ವಿರಾಳಗೊಂಡಿರುವ ಪರಿಣಾಮ ಭಾರತದ ಹವಾಮಾನದಲ್ಲಿ ಉಂಟಾಗಿರುವ ಪ್ರಮುಖ ಬದಲಾವಣೆಯನ್ನು ಸೆಪ್ಟೆಂಬರ್ 23 ಮತ್ತು 27ರ INSAT-3DS ಉಪಗ್ರಹ ಚಿತ್ರಗಳು ತೋರಿಸುತ್ತವೆ. 'ಪಾಶ್ಚಿಮಾತ್ಯ ಅಡಚಣೆ'ಯ (Western Disturbance) ಪರಿಣಾಮವಾಗಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಅದೇ ಸಮಯದಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಆಕಾಶವು ಸ್ವಚ್ಛವಾಗಿದ್ದಿ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಳೆಯ ಪ್ರಮಾಣ ತಗ್ಗುವ ನಿರೀಕ್ಷೆಯಿದೆ.

25
ಮುಂಗಾರು ಹಿಂತೆಗೆತ ಆರಂಭ

ಈಗಾಗಲೇ ನೈಋತ್ಯ ಮಾನ್ಸೂನ್‌ ಮಾರುತಗಳು ಹಿಂದೆ ಸರಿಯುವ ಅವಧಿ ಸಮೀಪಿಸುತ್ತಿದ್ದು, ಸಾಮಾನ್ಯವಾಗಿ ಅಕ್ಟೋಬರ್ 15ರ ಬಳಿಕ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಈ ವರ್ಷ ಬಹುಬೇಗ ಪ್ರಕ್ರಿಯೆ ಆರಂಭವಾಗಿದೆ. ಮುಂಗಾರು ಹಿಂತೆಗೆತ ಪಶ್ಚಿಮ ರಾಜಸ್ಥಾನದಿಂದ ಆರಂಭಗೊಂಡಿದ್ದು, ಪ್ರತಿ ವರ್ಷ ಮುಂಗಾರು ಆಗಮನದ ದಿನಾಂಕ ಬದಲಾದಂತೆ, ಹಿಂದಿರುಗುವ ದಿನಾಂಕವೂ ಬದಲಾವಣೆಯಾಗುತ್ತದೆ.

35
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಆದರೆ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ವಾಯುಭಾರ ಕುಸಿತದಿಂದ ಪ್ರಭಾವದಿಂದಾಗಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸ್ಥಳೀಯ ಹವಾಮಾನ ವ್ಯವಸ್ಥೆಗಳು ಅಲ್ಲಲ್ಲಿ ಮಳೆಯನ್ನು ಉಂಟುಮಾಡುವುದನ್ನು ಮುಂದುವರಿಸಬಹುದು. ಅದರಲ್ಲೂ ದಕ್ಷಿಣ ಭಾರತದ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು ಹಾಗೂ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

45
ರಾಜ್ಯದಲ್ಲಿ ಮತ್ತೆ ಅಲ್ಲಲ್ಲಿ ಮಳೆ

ಕರ್ನಾಟಕದ ಹಲವು ಭಾಗಗಳಲ್ಲಿ ಒಣಹವೆ ಮುಂದುವರೆದಿದ್ದು, ಹವಾಮಾನದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 28 ಮತ್ತು 29ರಂದು ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮಳೆಯ ಹವಾಮಾನ ಸೃಷ್ಠಿಯಾಗಿರುವ ನಿರೀಕ್ಷೆ ಇದೆ.

55
ಅಕ್ಟೋಬರ್ ಮೊದಲ ವಾರದ ವೇಳೆಗೆ ಮಳೆ ದೂರ

ಕರ್ನಾಟಕ ರಾಜ್ಯದ ಏಳು ದಿನಗಳ ಐಎಂಡಿ ಮುನ್ಸೂಚನೆಯ ಪ್ರಕಾರ, ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 01ರ ವರೆಗೂ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ ಇದೆ. ಸೆ. 29 ಮತ್ತು 30ರಂದು ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

Read more Photos on
click me!

Recommended Stories