Commonwealth ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಜಯಪುರ ಯುವಕ

Published : Sep 28, 2026, 10:51 AM IST

ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರ ಜಿಲ್ಲೆಯ ಸಚಿನ್ ಸಾಳುಂಕೆ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 105 ಕೆ.ಜಿ ಪುರುಷರ ವಿಭಾಗದಲ್ಲಿ ಇವರ ಸಾಧನೆಗೆ ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
15
ಪವರ್ ಲಿಫ್ಟಿಂಗ್‌ನಲ್ಲಿ ವಿಜಯಪುರ ಯುವಕನ ಸಾಧನೆ!

ವಿಜಯಪುರ: 2026ರ ಏಷ್ಯಾ ಗೇಮ್ಸ್‌ನಲ್ಲಿ ಭಾರತಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪದಕಗಳು ಸಿಗದಿದ್ದರೂ, ಪದಕಗಳ ಬರ ಎದುರಾಗಿಲ್ಲ. ಭಾನುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ 5, ಸ್ಕ್ವಾಶ್‌ನಲ್ಲಿ 2 ಪದಗಳನ್ನು ಗೆದ್ದಿದೆ. ಇದರೊಂದಿಗೆ ಒಟ್ಟು 37 ಪದಗಳನ್ನು ಗೆದ್ದುಕೊಂಡ, ಪದಕಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ. ಇದರ ನಡುವೆಯೇ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ವಿಜಯಪುರ ಯುವಕ ಮಹತ್ವದ ಸಾಧನೆ ಮಾಡಿದ್ದಾರೆ.

25
ತಿಗಣಿ ಬಿದರಿ ಗ್ರಾಮದಲ್ಲಿ ಸಂಭ್ರಮ

ಕಾಮನ್‌ವೆಲ್ತ್ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ಸಚಿನ್ ಸಾಳುಂಕೆ, ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಇದರೊಂದಿಗೆ ತಿಗಣಿ ಬಿದರಿ ಗ್ರಾಮದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಸಚಿನ್ ಕುಟುಂಬಸ್ಥರು ಮತ್ತು ಗೆಳೆಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

35
105 ಕೆ.ಜಿ ಪುರುಷ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಚಿನ್

ಪದಕ ಸ್ವೀಕರಿಸಿದ ಬಳಿಕ ವಿಡಿಯೋ ಕಾಲ್ ಮೂಲಕ ತಂದೆ ತುಕಾರಾಮ್, ತಾಯಿ ಪ್ರೇಮಾ ಜೊತೆಗೆ ಸಚಿನ್ ಸಾಳುಂಕೆ ಸಂತಸ ಹಂಚಿಕೊಂಡಿದ್ದಾರೆ. ಪವರ್ ಲಿಪ್ಟಿಂಗ್‌ ಪುರುಷರ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಸಚಿನ್ ಸಾಳುಂಕೆ ಸ್ಕಾಟ್‌ನಲ್ಲಿ 310kg, ಬ್ರೆಂಚ್‌ಪ್ರೆಸ್ 180kg, ಡೆಡ್‌ಲಿಪ್ಟ್ 270kg ಮಾಡಿದ್ದಾರೆ. 105 ಕೆ.ಜಿ ಪುರುಷ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಚಿನ್, ಇಂಗ್ಲೆಂಡ್‌ನ ಎದುರಾಳಿಯನ್ನ ಸೋಲಿಸಿ ಬೆಳ್ಳಿ ಪದಕ ಪಡೆದ ಮಿಂಚಿದ್ದಾರೆ. ಕಳೆದ 5 ವರ್ಷಗಳಿಂದ ಪವರ್ ಲಿಪ್ಟಿಂಗ್‌ನಲ್ಲಿ ತೊಡಗಿದ್ದ ಸಚಿನ್, 10 ವರ್ಷದಿಂದ ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

45
ಸಚಿವ ಎಂಬಿ ಪಾಟೀಲ್ ಮೆಚ್ಚುಗೆ

ಇನ್ನು, ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಸಚಿವ ಎಂಬಿ ಪಾಟೀಲ್, ನಮ್ಮ ಬಬಲೇಶ್ವರ ಮತ ಕ್ಷೇತ್ರದ ತಿಗಣಿಬಿದರಿ ಗ್ರಾಮದ ಯುವಕ ಸಚಿನ್ ಸಾಳುಂಕೆ ಅವರು ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿರುವುದು ವಿಜಯಪುರ ಜಿಲ್ಲೆಗೆ ಹೆಮ್ಮೆಯ ಕ್ಷಣ.

55
ಭಾರತದ ಕೀರ್ತಿ ಹೆಚ್ಚಿಸಿದ ಬಸವನಾಡಿನ ಹೆಮ್ಮೆಯ ಪುತ್ರ

105 ಕೆ.ಜಿ ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ ಸಚಿನ್ ಅವರು 310 ಕೆ.ಜಿ ಸ್ಕ್ವಾಟ್, 180 ಕೆ.ಜಿ ಬೆಂಚ್‌ ಪ್ರೆಸ್ ಹಾಗೂ 270 ಕೆ.ಜಿ ಡೆಡ್‌ ಲಿಫ್ಟ್ ಮೂಲಕ ಅಮೋಘ ಪ್ರದರ್ಶನ ನೀಡಿ, ಇಂಗ್ಲೆಂಡ್‌ ನ ಎದುರಾಳಿಯನ್ನು ಮೀರಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಬಸವನಾಡಿನ ಹೆಮ್ಮೆಯ ಪುತ್ರ ಸಚಿನ್ ಸಾಳುಂಕೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನಷ್ಟು ಎತ್ತರದ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ. ವಿಜಯಪುರದ ಮಣ್ಣಿನ ಶಕ್ತಿ ಜಗತ್ತಿನ ವೇದಿಕೆಯಲ್ಲಿ ಮತ್ತೊಮ್ಮೆ ಮೊಳಗಿದೆ! ಬಸವನಾಡಿನ ಹೆಮ್ಮೆ, ದೇಶದ ಕೀರ್ತಿ. ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ತಿಗಣಿ ಬಿದರಿಯ ಸಚಿನ್‌ ಸಾಳುಂಕೆ ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories