ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಗುರುವಾರ ಕೃಷ್ಣನಿಗೆ ಹುಟ್ಟುಹಬ್ಬದ ಪ್ರಯುಕ್ತ ಆಕರ್ಷಕವಾದ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನ ಅಲಂಕಾರ ಮಾಡಲಾಗಿತ್ತು.
undefined
ಬಾಲಕೃಷ್ಣನಿಗೆ ಒಂದು ಲಕ್ಷ ದಷ್ಟು ಲಡ್ಡು, ಚಕ್ಕುಲಿಗಳ ನೈವೇದ್ಯ ಸಮರ್ಪಿಸಿ, ಮಹಾಪೂಜೆಯನ್ನು ನೆರವೇರಿಸಿದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು
undefined
ಇದಕ್ಕೂ ಮೊದಲು ಸಂಪ್ರದಾಯದಂತೆ ಪರ್ಯಾಯ ಶ್ರೀಗಳು, ಪಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರು ಮತ್ತು ವಿದ್ಯಾರಾಜೇಶ್ವರ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಕೃಷ್ಣನಿಗೆ ನೈವೇದ್ಯ ಮಾಡುವ ಲಡ್ಡುಗಳನ್ನು ಸ್ವತಃ ತಾವೇ ತಯಾರಿಸುವ ಮೂಲಕ ಲಡ್ಡು ಮುಹೂರ್ತ ನೆರವೇರಿಸಿದರು.
undefined
ಗುರುವಾರ ಮಧ್ಯರಾತ್ರಿ 12.16 ಗಂಟೆಗೆ ಸರಿಯಾಗಿ ಕೃಷ್ಣಾವತಾರದ ಗಳಿಗೆಯಲ್ಲಿ ಪರ್ಯಾಯ ಮತ್ತು ಇತರ ಮಠಾಧೀಶರು ಕೃಷ್ಣನಿಗೆ ಕೃತಜ್ಞತಾಪೂರ್ವಕ ಜಲ ಅಘ್ರ್ಯ ಮತ್ತು ಕೃಷ್ಣನಿಗೆ ಹಾಲಿನ ಅಘ್ರ್ಯಗಳನ್ನು ಪ್ರಧಾನ ಮಾಡಿದರು.
undefined
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜಾಂಗಣದಲ್ಲಿ ಪ್ರಸಿದ್ಧ ಕಲಾವಿದರುಗಳಿಂದ ಸ್ಯಾಕ್ಸೋಫೋನ್ ವಾದನ, ವೀಣಾವಾದನ, ಕೊಳಲುವಾದನ ಕಚೇರಿಗಳು ನಡೆದವು.
undefined
ಸಂಗೀತ ಕಛೇರಿ ಆಲಿಸುವುದಕ್ಕೆ ಭಕ್ತರಿಗೆ ಅವಕಾಶ ಇಲ್ಲದಿದ್ದುದರಿಂದ, ಮಠದ ಫೇಸ್‌ಬುಕ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಯಿತು.
undefined
ಬಳಿಕ ಕೆಲವೇ ಕೆಲವು ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು
undefined
ಇಂದು (ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವ - ಗೊಲ್ಲ ವೇಷಧಾರಿಗಳಿಂದ ಮೊಸರುಕುಡಿಕೆ ಒಡೆಯುವ ಆಚರಣೆಗಳು ನಡೆಯಲಿವೆ.
undefined
ಲಕ್ಷಾಂತರ ಮಂದಿ ಭಕ್ತರು ಸಂಭ್ರಮದಿಂದ ಭಾಗವಹಿಸುವ ಈ ಉತ್ಸವದಲ್ಲಿ ಈ ಬಾರಿ, ಕೊರೋನಾದ ಹಿನ್ನೆಲೆಯಲ್ಲಿ ಸಾರ್ವಜನರು ಭಾಗವಹಿಸುವುದಕ್ಕೆ ಅವಕಾಶ ಇಲ್ಲ. ಅಷ್ಟ ಮಠಾಧೀಶರು ಮತ್ತು ಮಠದ ಪರಿವಾರದವರಷ್ಟೇ ಭಾಗವಹಿಸಲಿದ್ದಾರೆ.
undefined
ಈ ಬಾರಿ ಕೃಷ್ಣಾಷ್ಟಮಿಯನ್ನು ಸರಳವಾಗಿ ಆಚರಿಸಬೇಕು, ಸಂಪ್ರದಾಯದಂತೆ ಈ ಬಾರಿ ಹುಲಿ ಇತ್ಯಾದಿ ವೇಷ ಧರಿಸುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ, ಅಲ್ಲಲ್ಲಿ ಕೆಲವು ಮಂದಿ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದುದು ಕಂಡುಬಂತು.
undefined
ಕೃಷ್ಣಾಷ್ಟಮಿಯ ಪ್ರಯುಕ್ತ ದೂರದೂರುಗಳಿಂದ ಹೂವು - ತರಕಾರಿ ವ್ಯಾಪಾರಿಗಳು ಉಡುಪಿಗೆ ಬಂದಿದ್ದಾರೆ. ಆದರೆ ಸರಳ ಆಚರಣೆಯ ಹಿನ್ನೆಲೆಯಲ್ಲಿ ಅವರಿಗೆ ವ್ಯಾಪಾರ ಅಷ್ಟೇನೂ ಇರಲಿಲ್ಲ.
undefined