ಸೊರಬದ ಬಿಜೆಪಿ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಮಂಜುಳಾ ಅವರ ಆತ್ಮ*ಹತ್ಯೆಗೆ ಪತಿಯ ಕಿರುಕುಳವೇ ಕಾರಣ ಎಂದು ಮಂಜುಳಾ ಅವರ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಭು ಮೇಸ್ತ್ರಿ ಬಂಧಿತ ಬಿಜೆಪಿ ಮುಖಂಡನಾಗಿದ್ದು, ಸೊರಬ ಪುರಸಭೆ ಮಾಜಿ ಅಧ್ಯಕ್ಷ. ಹಾರ್ಡ್‌ವೇರ್ ವ್ಯವಹಾರ ಜೊತೆ ಪ್ರಭು ಮೇಸ್ತ್ರಿ ರಾಜಕೀಯದಲ್ಲಿಯೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದನು.
24
ಬಂಧನಕ್ಕೆ ಕಾರಣ ಏನು?
ಭಾನುವಾರ ಪ್ರಭು ಮೇಸ್ತ್ರಿ ಪತ್ನಿ ಮಂಜುಳಾ (39) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯ ನಿವಾಸದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿಗೆ ಪತಿಯ ಕಿರುಕುಳ ಕಾರಣ ಎಂದು ಮಂಜುಳಾ ಪೋಷಕರು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಬಂಧನ ಮಾಡಿದ್ದಾರೆ.
34
ಮದುವೆಯಾದ್ರೂ ಮಹಿಳೆ ಜೊತೆ ಒಡನಾಟದ ಆರೋಪ
2024ರಲ್ಲಿ ಹಾವೇರಿಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ ಜೊತೆ ಪ್ರಭು ಮೇಸ್ತ್ರಿ ಮದುವೆಯಾಗಿತ್ತು. ಎರಡನೇ ಮದುವೆ ಬಳಿಕವೂ ಪ್ರಭು ಮೇಸ್ತ್ರಿ ಮಹಿಳೆ ಜೊತೆ ಒಡನಾಟ ಹೊಂದಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ರಾಜೀ ಪಂಚಾಯ್ತಿಯೂ ನಡೆದಿತ್ತು ಎಂದು ತಿಳಿದು ಬಂದಿದೆ.
ರಾಜೀ ಪಂಚಾಯ್ತಿ ಬಳಿಕವೂ ಪ್ರಭು ಮತ್ತೆ ಅದೇ ಮಹಿಳೆಯೊಂದಿಗೆ ಓಡಾಡ್ತಿದ್ದ ಆರೋಪವಿದೆ. ಈ ಹಿನ್ನೆಲೆ ಮಂಜುಳಾ ಅವರಿಗೆ ಕಿರುಕುಳ ನೀಡುತ್ತಿದ್ದ. ಪತಿ ಪ್ರಭು ಮೇಸ್ತ್ರಿಯ ಕಿರುಕುಳ ತಾಳಲಾರದೇ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿ ಮಂಜುಳಾ ತಾಯಿ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.