ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಬಳಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ನಾಲೆಗೆ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾರ್ಗಲ್ ಸಮೀಪದ ಬಿದರೂರು ಚಾನೆಲ್ ಬಳಿ ಆತ್ಮ*ಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಯುವತಿ ತುಮಕೂರು ಮೂಲದವರು ಎಂದು ತಿಳಿದು ಬಂದಿದ್ದು, ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮ*ಹತ್ಯೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ.
25
ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರು
ಮೀನು ಹಿಡಿಯುತ್ತಿದ್ದ ಸಾರ್ವಜನಿಕರು ಯುವತಿಯ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿ ಕಾರ್ಗಲ್ ಪೊಲೀಸ್ ಠಾಣೆ ಮತ್ತು ಇಅರ್‌ಎಸ್‌ಎಸ್ 112ಗೆ ಕರೆ ಮಾಡಿದರು. ಪೊಲೀಸರು ಬರುವ ಸಮಯದಲ್ಲೇ ಯುವತಿ ನಾಲೆಗೆ ಹಾರಿದ್ದಾಳೆ.
35
ಯುವತಿಯ ವಿಚಾರಣೆ
ಯುವತಿ ನಾಲೆಗೆ ಜಿಗಿಯುತ್ತಿದ್ದಂತೆ ಇಆರ್‌ವಿ ಅಧಿಕಾರಿ ಎಚ್.ಸಿ.ಅಣ್ಣಪ್ಪ ಚಾಲಕ ರಾಘವೇಂದ್ರ, ಕಾರ್ಗಲ್ ಪೊಲೀಸ್ ಠಾಣೆಯ ಸಂದೀಪ್ ಮತ್ತು ಪುರುಷೋತ್ತಮ್ ಕೂಡಲೇ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ನಾಲೆಯಿಂದ ಯುವತಿಯನ್ನು ನೀರಿನಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.
ಪೊಲೀಸರ ವಿಚಾರಣೆಯಲ್ಲಿ ಯುವತಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ್ದು ತಿಳಿದುಬಂದಿದೆ. ಪೊಲೀಸರು ಯುವತಿಯ ಪಾಲಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು ಮತ್ತು ಆಕೆಯನ್ನು ಕರೆದೊಯ್ಯಲು ಸೂಚಿಸಿದರು.
55
ಯುವತಿಯ ಪ್ರಾಣ ಉಳಿಸಿದ ಪೊಲೀಸರು
ಸದ್ಯ ಯುವತಿಯನ್ನು ಸಾಗರ ಪಟ್ಟಣದ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ. ಯುವತಿಯನ್ನು ರಕ್ಷಿಸಿದ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ನಿಖಿಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಿದ್ದರಿಂದ ಯುವತಿಯ ಪ್ರಾಣ ಉಳಿದಿದೆ. ಪೊಲೀಸರು ಯುವತಿ ಗುರುತನ್ನು ರಹಸ್ಯವಾಗಿರಿಸಿದ್ದಾರೆ