ಕೇರಳದ ಚುನಾವಣೆಯಲ್ಲಿ ಕಮಾಲ್ ಮಾಡಿದ ಕಾಫಿನಾಡಿನ ಯುವ ನಾಯಕ; ಗೆಲುವಿನ ಹಿಂದೆ ಚಿಕ್ಕಮಗಳೂರಿನ ಯುವಕ

Published : May 05, 2026, 06:27 AM IST

ಚಿಕ್ಕಮಗಳೂರಿನ ಯುವ ಕಾಂಗ್ರೆಸ್ ನಾಯಕ ಸಂದೀಪ್ ಅವರು ಕೇರಳ ಚುನಾವಣಾ ಉಸ್ತುವಾರಿಯಾಗಿ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸಿ ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ. ಅವರ ಸಂಘಟನಾ ಚಾತುರ್ಯ ಮತ್ತು ಸ್ಥಳೀಯ ಸಮಸ್ಯೆಗಳ ಆಳವಾದ ಅಧ್ಯಯನಕ್ಕೆ ಹಿರಿಯ ನಾಯಕರಿಂದ ಶ್ಲಾಘನೆ ವ್ಯಕ್ತವಾಗಿದೆ.

PREV
14
ಚಿಕ್ಕಮಗಳೂರಿನ ಯುವ ನಾಯಕ ಸಂದೀಪ್

ಚಿಕ್ಕಮಗಳೂರು: ಕೇರಳ ಚುನಾವಣೆ ಯಶಸ್ಸಿನ ಹಿಂದೆ ಚುನಾವಣಾ ಉಸ್ತುವಾರಿ ಚಿಕ್ಕಮಗಳೂರಿನ ಯುವ ನಾಯಕ ಸಂದೀಪ್ ಅವರನ್ನು ಎಐಸಿಸಿ ಕಾರ್ಯದರ್ಶಿ ‌ಕೆ.ಸಿ. ವೇಣುಗೋಪಾಲ್ ಚುನಾವಣಾ ಫಲಿತಾಂಶದ ಬಳಿಕ ತಬ್ಬಿ ಸಂಭ್ರಮಿಸಿದ್ದಾರೆ.

24
ಕೇರಳ ಚುನಾವಣೆ ಉಸ್ತುವಾರಿ

ಚಿಕ್ಕಮಗಳೂರಿನ ಕಾಂಗ್ರೆಸ್‌ ಯುವ ನಾಯಕ ಸಂದೀಪ್‌, ಕೇರಳ ಚುನಾವಣೆ ಉಸ್ತುವಾರಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕೇರಳದ ರಾಜಕೀಯ ಪರಿಸ್ಥಿತಿ ಆಳವಾಗಿ ಅಧ್ಯಯನ ಮಾಡಿ, ಸ್ಥಳೀಯ ಸಮಸ್ಯೆಗಳು, ಜನರ ಮನೋಭಾವ ಮತ್ತು ಮತದಾರರ ನಿರೀಕ್ಷೆಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡಿದ್ದರು.

34
ಚುನಾವಣೆ ಜಯಕ್ಕೆ ಬಲವಾದ ಬೆಂಬಲ

ಗ್ರಾಮ ಮಟ್ಟದಿಂದ ನಗರ ಮಟ್ಟದವರೆಗೆ ಕಾರ್ಯಕರ್ತರನ್ನು ಸಂಘಟಿಸಿ, ಬಲವಾದ ತಂಡ ನಿರ್ಮಿಸಿ ಸಾಮಾಜಿಕ ಜಾಲ ತಾಣಗಳ ಬಳಕೆ, ಮನೆ ಮನೆಗೆ ತಲುಪುವ ಕಾರ್ಯಕ್ರಮಗಳು, ಯುವಕರನ್ನು ಆಕರ್ಷಿಸುವ ಮೂಲಕ ಕೇರಳ ಚುನಾವಣೆ ಜಯಕ್ಕೆ ಬಲವಾದ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ದಕ್ಷಿಣದ ಹೊಸ ಚಾಣಕ್ಯ; ಸಿದ್ದರಾಮಯ್ಯಗೆ ಸಲಹೆ ನೀಡಿದ್ದ ವ್ಯಕ್ತಿಯಿಂದಲೇ ಟಿಪ್ಸ್ ಪಡೆದಿದ್ರು ನಟ ವಿಜಯ್‌

44
ನಾಯಕರಿಂದ ಶ್ಲಾಘನೆ

ಸೋಮವಾರ ಕೇರಳದ ಕಾಂಗ್ರೆಸ್‌ನ ಯಶಸ್ಸಿನ ಕಥೆಯಲ್ಲಿ ಸಂದೀಪ್ ಅವರ ಶಕ್ತಿ ಮತ್ತು ನಿಷ್ಠೆಯ ಸಂಕೇತವಾಗಿ ಉಳಿದಿದೆ. ಇವರ ಪರಿಶ್ರಮಕ್ಕೆ ಚಿಕ್ಕಮಗಳೂರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಅಪ್ಪನ ಸ್ಥಾನ ಉಳಿಸಿಕೊಂಡ ಉಮೇಶ್‌ ಮೇಟಿ; ಬಿಜೆಪಿಯ ಚರಂತಿಮಠ ವಿರುದ್ಧ 22332 ಮತಗಳ ಅಂತರದ ಜಯ

Read more Photos on
click me!

Recommended Stories