ಹುಣ್ಣುಮೆ ರಾತ್ರಿಯ ನಿಧಿಗಾಗಿ ಕನ್ನ!
ಹುಣ್ಣುಮೆ ಮತ್ತು ಅಮಾವಾಸ್ಯೆ ರಾತ್ರಿಯಂದು ಈ ಅಪರಿಚಿತ ಕಾರ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳೀಯರ ಪ್ರಕಾರ, ದೇವಸ್ಥಾನದ ಒಳಭಾಗದಲ್ಲಿ ಸುಮಾರು 10 ಅಡಿ ಆಳದ ಗುಂಡಿ ತೋಡಲಾಗಿದೆ. ಇದು ಸಂಪೂರ್ಣ ಯೋಜಿತ ರೀತಿಯಲ್ಲಿ ನಡೆದಿರಬಹುದೆಂಬ ಸಂದೇಹವಿದೆ.
ದಿನ ನಿತ್ಯದಂತೆ ಹತ್ತಿರದ ರೈತರೊಬ್ಬರು ದನ ಮೇಯಿಸಲು ಅರಣ್ಯ ಭಾಗದತ್ತ ಹೋಗಿದ್ದ ವೇಳೆ ದೇವಾಲಯದ ಒಳಗೆ ತೋಡಿದ ಗುಂಡಿ ಹಾಗೂ ಅಲ್ಲಿರುವ ಮಣ್ಣಿನ ರಾಶಿಯನ್ನು ಕಂಡು ಆಘಾತಕ್ಕೆ ಒಳಗಾದರು. ಕೂಡಲೇ ಈ ಮಾಹಿತಿಯನ್ನು ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.