ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟ ಪುನೀತ್ ರಾಜಕುಮಾರ್‌: 600 ಮೆಟ್ಟಿಲು ಏರಿ ಸ್ವಾಮಿಯ ದರ್ಶನ ಪಡೆದ ಅಪ್ಪು

First Published | Oct 22, 2020, 1:07 PM IST

ಗಂಗಾವತಿ(ಅ.22): ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಇಂದು(ಗುರುವಾರ) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. ಬರೋಬ್ಬರಿ 600 ಮೆಟ್ಟಿಲುಗಳನ್ನು ಏರಿ ಆಂಜನೇಯ ಸ್ವಾಮಿ ದರ್ಶನವನ್ನ ಪಡೆದುಕೊಂಡು, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟ
ಗಂಗಾವತಿ ಬಳಿ ಇರುವ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಜೇಮ್ಸ್‌ ಚಿತ್ರದ ಶೂಟಿಂಗ್‌
Tap to resize

ಕಳೆದ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡ ಪುನೀತ್‌ ರಾಜಕುಮಾರ್‌
ಜೇಮ್ಸ್‌ ಚಿತ್ರದಲ್ಲಿ ನಟಿಸುತ್ತಿರುವ ತೆಲುಗು ಚಿತ್ರರಂಗದ ಖ್ಯಾತ ನಟ ಗಂಗಾವತಿ ಮೂಲದ ಶ್ರೀಕಾಂತ್‌
ಅಂಜನಾದ್ರಿ ಬೆಟ್ಟದಲ್ಲಿ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್‌ ಕೊಟ್ಟ ಅಪ್ಪು
ಗಂಗಾವತಿಯಲ್ಲಿ ಭವ್ಯ ಸೆಟ್‌ ಹಾಕಲಾಗಿದೆ. ತೆಲುಗು ನಟ ಶ್ರೀಕಾಂತ್‌ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಷಕರೊಂದಿಗೆ ಪುನೀತ್‌ ರಾಜಕುಮಾರ್‌
ದೇವಸ್ಥಾನದ ಆವರಣದಲ್ಲಿದ್ದ ಕೋತಿಗಳಿಗೆ ಬಾಳೆಹಣ್ಣು ನೀಡಿದ ಅಪ್ಪು
ಇದೇ ವೇಳೆ ಅಂಜನಾದ್ರಿ ಬೆಟ್ಟಕ್ಕೆ ಅಗಮಿಸಿ ಸ್ವಾಮಿಯ ದರ್ಶನ ಪಡೆದ ಪುನೀತ್‌ ರಾಜಕುಮಾರ್‌ಗೆ ದೇವಸ್ಥಾನ ಸಮಿತಿಯಿಂದ ಸನ್ಮಾನ
ಪುನೀತ್‌ ರಾಜಕುಮಾರ್‌ ಆಗಮನದ ಹಿನ್ನೆಲೆಯಲ್ಲಿ ಅಂಜಾನದ್ರಿ ಬೆಟ್ಟದಲ್ಲಿ ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಹೀಗಾಗಿ ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

Latest Videos

click me!