ಕೊರೋನಾ ಅಟ್ಟಹಾಸ: ಮಾಸ್ಕ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾರೀ ಸ್ಪಂದನೆ

First Published Oct 22, 2020, 9:50 AM IST

ಬೆಂಗಳೂರು(ಅ.22): ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೂ ಮಾಸ್ಕ್‌ ಧರಿಸದೆ ನಿರ್ಲಕ್ಷ್ಯ ಮಾಡುವವರಿಗೆ ಜಾಗೃತಿ ಮೂಡಿಸುವುದಕ್ಕಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ ಸಹಯೋಗದಲ್ಲಿ ಬುಧವಾರ ನಡೆಸಿದ ‘ಟ್ವೀಟಥಾನ್‌’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಮಾಸ್ಕ್‌ ಧರಿಸಿ, ಸರಿಯಾಗಿ ಧರಿಸಿ’ ಎಂಬ ಧ್ಯೇಯವಾಕ್ಯದಡಿ ‘ಉಗುಳಬೇಡಿ ಮತ್ತು ವೈರಾಣು ಹರಡಬೇಡಿ’ ಎಂಬ ಸಂದೇಶ ನೀಡಿದ್ದರು. ಮಾಸ್ಕ್‌ಆನ್‌ಸ್ಪಿಟ್‌ನಾಟ್‌ ಎಂಬ ಹ್ಯಾಶ್‌ಟ್ಯಾಗ್‌ಗೆ ನಾಗರಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
undefined
ಸೆಲ್ಫಿ ಫೋಟೋಗಳು, ಕಾರ್ಟೂನ್‌, ಮಿಮೀಸ್‌, ಸೈಕಲ್‌ ತುಳಿಯುತ್ತಿರುವ ಮಕ್ಕಳು ಮಾಸ್ಕ್‌ ಧರಿಸಿರುವುದು, ಮಾಸ್ಕ್‌ ಧರಿಸಿ ಸ್ನೂಕರ್‌ ಆಡುತ್ತಿರುವುದು, ಹೋಮ ಮಾಡುವ ವೇಳೆ ಮಾಸ್ಕ್‌ ಧರಿಸಿ ಕುಳಿತ ಮಹಿಳೆಯರು, ಆಸ್ಪತ್ರೆಯಲ್ಲಿ ಮಾಸ್ಕ್‌ ಧರಿಸಿರುವ ವೃತ್ತಿನಿರತ ವೈದ್ಯರು, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗದ ಭಂಗಿಯಲ್ಲಿ ಕುಳಿತ ಯೋಗಪಟುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
undefined
ಮಾಸ್ಕ್‌ ಅನ್ನು ಏಕೆ ಧರಿಸಬೇಕೆಂದು ಪ್ರೇರಣೆ ನೀಡುವ ಹಲವಾರು ವೀಡಿಯೋಗಳು, ಪೇಟಿಂಗ್‌, ಚಿತ್ರಕಲೆಗಳ ಮೂಲಕವೂ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕೆಲವರು ಕೋತಿಗಳು ಮಾಸ್ಕ್‌ಗಳನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಾಕಿ ತಮಾಷೆಯಾಗಿಯೂ ಟ್ವೀಟಥಾನ್‌ ಅನ್ನು ಆನಂದಿಸಿದ್ದಾರೆ.
undefined
ಈ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಮಾಸ್ಕ್‌ಗಳಲ್ಲಿ ಯಾವ ರೀತಿಯಲ್ಲಿ ಚಿತ್ರಿಸಬಹುದು ಎಂಬುದನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ. ಟ್ವಿಟರ್‌ ಖಾತೆ ತೆರೆಯದ ಹಲವಾರು ಜನರು ವಾಟ್ಸಾಪ್‌ ಮೂಲಕವೂ ಟ್ವೀಟಥಾನ್‌ಗೆ ಸ್ಪಂದಿಸಿದ್ದಾರೆ.
undefined
ನವರಾತ್ರಿ, ಆಯುಧ ಪೂಜೆ, ದೀಪಾವಳಿ, ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಜನರು ಮೈಮರೆಯದೆ ಕೊರೋನಾ ವಿರುದ್ಧ ಹೋರಾಡಲು ಜಾಗೃತರಾಗಿರಬೇಕು. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಹಾಗೂ ಸಾವಿನ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ನಿರ್ಲಕ್ಷ್ಯ ಬೇಡ ಎಂದೂ ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
undefined
ಮಾಸ್ಕ್‌ ಧರಿಸುವಂತೆ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಮತ್ತು ಫೇಸ್‌ಬುಕ್‌ನಲ್ಲಿಯೂ ನಮ್ಮ ಬೆಂಗಳೂರು ಪ್ರತಿಷ್ಠಾನ ಗುರುವಾರದಿಂದ ಒಂದು ವಾರಗಳ ಕಾಲ ಅಭಿಯಾನ ನಡೆಸುವುದಾಗಿ ತಿಳಿಸಿದೆ.
undefined
ಸಾಮಾನ್ಯ ಜನರು ಟ್ವಿಟರ್‌ಗಿಂತ ಫೇಸ್‌ಬುಕ್‌ ಬಳಕೆ ಹೆಚ್ಚು ಮಾಡುತ್ತಾರೆ. ಆದ್ದರಿಂದ ಜನರನ್ನು ಜಾಗೃತಿ ಮೂಡಿಸುವುದಕ್ಕಾಗಿ ಒಂದು ವಾರ ಅಭಿಯಾನ ನಡೆಸಲಾಗುತ್ತದೆ. ಟ್ವೀಟಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಭಿಯಾನ ಮುಂದುವರಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
undefined
click me!