ಯಾದಗಿರಿಯಲ್ಲಿ ತಗ್ಗಿದ ಪ್ರವಾಹ: ಮಂತ್ರಿಗಳೂ ಬರ್‍ಲಿಲ್ಲ, ಪರಿಹಾರವೂ ಸಿಕ್ಕಿಲ್ಲ..!

First Published | Oct 22, 2020, 11:14 AM IST

ಆನಂದ್ ಎಂ. ಸೌದಿ

ಯಾದಗಿರಿ(ಅ.22): ಸಕಾಲಕ್ಕೆ ಬ್ರಿಡ್ಜ್ ಕಂ ಬ್ಯಾರೇಜಿನ ಗೇಟುಗಳ ತೆರೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ತಪ್ಪಿನಿಂದಾಗಿ, ಪ್ರವಾಹದ ಹಿನ್ನೀರು ನುಗ್ಗಿ ಹಾನಿ ಮಾಡಿದ್ದ ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಪೀಡಿತ ಪ್ರದೇಶದಲ್ಲೀಗ ನೀರವ ಮೌನ ಮಡುಗಟ್ಟಿದೆ.
 

ಸನ್ನತಿಯ ಬ್ಯಾರೇಜಿನಿಂದ ಭೀಮಾ ನದಿಗೆ ಅ.15 ರಂದು ಬೆಳಿಗ್ಗೆ ಬಿಡುಗಡೆ ಮಾಡಿದ ಸುಮಾರು 3.20 ಲಕ್ಷ ಸಾವಿರ ಕ್ಯೂಸೆಕ್ ನೀರು ಹೊರಹರಿವು ಹೆಚ್ಚಿಸುತ್ತ ಹೋದಂತೆ, ನಾಯ್ಕಲ್ ಗ್ರಾಮದ ಬೈಪಾಸ್ ರಸ್ತೆಯಲ್ಲಿನ ನೂರಾರು ಮನೆಗಳಲ್ಲಿ ನೀರು ಜಮೆಯಾಗತೊಡಗಿತ್ತು. ನೋಡನೋಡುತ್ತಲೇ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸಂಗ್ರಹವಾಗಿ, ಸಂಜೆಯ ವೇಳೆಗ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಜೀವ ಬದುಕಿದರೆ ಸಾಕು ಎಂದು ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಕೆಲವರನ್ನು ಕಾಳಜಿ ಕೇಂದ್ರದಲ್ಲಿರಿಸಲಾಗಿತ್ತು.
undefined
ಬುಧವಾರ ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ, ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಆತಂಕದಲ್ಲೇ ಒಬ್ಬೊಬ್ಬರಾಗಿ ಮನೆ ಸೇರುತ್ತಿರುವುದು ಕಂಡುಬಂತು. ನೀರು ನುಗ್ಗಿ, ಕೆಸರುಮಯವಾಗಿದ್ದ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಲ್ಲಿನ ನಿವಾಸಿಗಳು ಹರಸಾಹಸ ಪಡುತ್ತಿದ್ದರು. ಪ್ರವಾಹದ ವೇಳೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಜನ-ಜಾನುವಾರುಗಳು ಮನೆಗಳಿಗೆ ಎಡತಾಕುತ್ತಿರುವುದು ಕಂಡು ಬಂತು.
undefined

Latest Videos


ಅನೇಕರ ಮನೆಗಳು ಬಿರುಕು ಬಿಟ್ಟಿವೆ. ನೀರಿನಿಂದಾಗಿ ಮನೆಗಳಲ್ಲಿ ಕೆಸರುಗಟ್ಟಿದೆ. ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಆಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇಲ್ಲಿ ಕಾಲಿಡಲೇ ಇಲ್ಲ. ರಸ್ತೆ ಮೇಲೆ ಕೆಲ ಕ್ಷಣಗಳ ಕಾಲ ನಿಂತು ಹೋಗಿದ್ದಾರೆ. ಇಂತಹವರಿಂದ ನಮಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಕನ್ನಡಪ್ರಭದೆದುರು ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ಮೆಹಬೂಬ್ ಸಾಬ್, ನಮ್ಮ ಪಾಡು ಹೇಳತೀರದು ಎಂದರು.
undefined
ನವೆಂಬರ್ 11 ರಂದು ನಡೆಯಲಿರುವ ಮಗಳ ಮದುವೆಗೆಂದು ಗ್ರಾಮದ ರಷೀದ್-ಸಾಬೇರ್ ದಂಪತಿ ಸಾಮಾನುಗಳನ್ನು ತಂದಿದ್ದರು. ಮನೆ ಮುಳುಗುತ್ತಿದ್ದಂತೆಯೇ, ಆ ಎಲ್ಲವನ್ನೂ ಮಾಳಿಗೆಯ ಮೇಲಿಟ್ಟು ಸಂರಕ್ಷಿಸುವ ಯತ್ನ ಮಾಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆಯೇ ಹೊರಗೋಡಿ ಹೋದಾಗ, ಮನೆಯಲ್ಲಿಟ್ಟಿದ್ದ ಎರಡು ತೊಲೆ ಬಂಗಾರ ನೀರುಪಾಲಾಗಿದೆ ಎಂದು ಸಂತ್ರಸ್ತ ಅಬ್ಬಾಸ್ ಬೀ ಕಣ್ಣೀರಾದ.
undefined
ಸಂತ್ರಸ್ತರ ನೆರವಿಗಾಗಿ ತುರ್ತು ಪರಿಹಾರ ಎಂದು ಸರ್ಕಾರ 10 ಸಾವಿರ ರು.ಗಳ ನೆರವು ಘೋಷಿಸಿದೆ. ಆದರೆ, ಇಲ್ಲಿವರೆಗೂ (ಬುಧವಾರ, ಅ.21) ಯಾವ ಪರಿಹಾರನೂ ಇಲ್ಲ. ಹಣ ಅಕೌಂಟಿಗೆ ಜಮೆ ಮಾಡಲಾಗುತ್ತದೆ ಎಂದಿದ್ದರು. ಆಡಳಿತ ಪರಿಹಾರ ಕೊಟ್ಟಿದೆ ಎನ್ನುತ್ತಿದೆ. ಆದರೆ, ವಾರವಾಯ್ತು ಕಾಣ್ತಿಲ್ಲ ಎನ್ನುವ ಮೈನೋದ್ದೀನ್, ನಾಯ್ಕಲ್ ಗ್ರಾಮದ ಸಂತ್ರಸ್ತರಿಗೆ ಈವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ದೂರಿದ್ದಾರೆ.
undefined
ಮಳೆ-ಚಳಿಯೆನ್ನದೆ ಮನೆಯಿಂದ ಹೊರಬಂದಿರುವ ಗೂಡೂಮಾಬೀ ಸಾಕಿದ ದನ ಹಾಗೂ ಕುರಿಗಳ ಜೀವ ರಕ್ಷಿಸಲು ಹೆಣಗಾಡುತ್ತಿದ್ದಾಳೆ. ಬಾಷುಮಿಯಾ ಮನೆ ಕುಸಿದು ಬಿದ್ದಿದೆ, ಶೇಖಪ್ಪನ ಎಂಟು ಎಕರೆ ಹೊಲದಲ್ಲಿನ ಭತ್ತ ನೆಲಕಚ್ಚಿದೆ. ಇಲ್ಲಿನ 630 ಹೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಪ್ರವಾಹ ಪಾಲಾಗಿದೆ. ಎಲ್ಲರೂ ಹೊಸ ಜೀವನ ಕಟ್ಟಿಕೊಳ್ಳುವಂತಿದೆ.
undefined
click me!