ಸುಚಿ ಆಂಟಿಯ ಕಮಲಾಕರ ಭಟ್‌ನ ಮತ್ತೊಂದು ಕರಾಳ ಮುಖ ಬಯಲು; ಜ್ಯೋತಿಷಿಯ ಹೊಲಸು ಕೆಲಸ ರಿವೀಲ್?

Published : Feb 22, 2026, 11:57 AM IST

ವಸಂತ್ ನಾಯ್ಕ್ ಕೊ*ಲೆ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಟನ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಇದು ಆತನಿಗೆ ಜಾಮೀನು ಸಿಗುವ ಸಾಧ್ಯತೆಯನ್ನು ಕ್ಷೀಣಿಸಿದೆ.

PREV
15
ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಟ

ವಸಂತ್ ನಾಯ್ಕ್ ಎಂಬವರ ಕೊ*ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಟನಿಗೆ ಮತ್ತೊಂದು ಬಿಗ್‌ ಶಾಕ್ ಎದುರಾಗಿದೆ. ವಸಂತ್ ನಾಯ್ಕ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕಮಲಾಕರ ಭಟ್‌ನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

25
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಪ್ರೇಯಸಿ ಸುಚಿತ್ರಾ

ವಸಂತ್ ನಾಯ್ಕ ಕೊ*ಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಪ್ರೇಯಸಿ ಸುಚಿತ್ರಾ ಸೇರಿದಂತೆ ಐವರು ಜೈಲು ಸೇರಿದ್ದಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕಮಲಾಕರ್ ಭಟ್ ವಿರುದ್ಧ ಕೇಳಿ ಬಂದಿದೆ.

35
ಪೋಕ್ಸೋ ಪ್ರಕರಣ

ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಕಮಲಾಕರ್ ಭಟ್ ಸದ್ಯಕ್ಕೆ ಜೈಲಿನಿಂದ ಹೊರ ಬರುವುದು ಅಸಾಧ್ಯವಾದ ಸನ್ನಿವೇಶ ಸೃಷ್ಟಿಯಾಗಿದೆ. ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗುತ್ತಾ ಎಂಬುದರ ಬಗ್ಗೆ ತಿಳಿದು ಬರಬೇಕಿದೆ.

45
ಮೊಬೈಲ್ ನೆಟ್‌ವರ್ಕ್

ಇನ್ನು ವಸಂತ್ ನಾಯ್ಕ್ ಪ್ರಕರಣದಲ್ಲಿ ಪೊಲೀಸ್ ವಿಚಾರಣೆ ಎದುರಿಸುವ ಕಮಲಾಕರ್ ಭಟ್, ಘಟನೆ ನಡೆದ ಸಂದರ್ಭದಲ್ಲಿ ನಾನು ಸ್ಥಳದಲ್ಲಿರಲಿಲ್ಲ. ಬೇಕಿದ್ರೆ ತನ್ನ ಮೊಬೈಲ್ ನೆಟ್‌ವರ್ಕ್ ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದನಂತೆ. ಕೊ*ಲೆ ನಡೆದಾಗ ಕಮಲಾಕರ್ ಭಟ್ ಸಿದ್ದಾಪುರದಲ್ಲಿರೋದು ತನಿಖೆಯಲ್ಲಿ ತಿಳಿದು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮಂಗಳಮುಖಿ, ಪ್ರಿಯಕರನ ಸಾವಿಗೆ ಬಿಗ್‌ ಟ್ವಿಸ್ಟ್; ಐದಾರು ವರ್ಷದ ಪ್ರೇಮಕಥೆಗೆ ದುರಂತ ಅಂತ್ಯ!

55
ಜಾಮೀನು ಸಿಗುವ ನಿರೀಕ್ಷೆ

ಈ ಒಂದು ಕಾರಣದಿಂದ ಕಮಲಾಕರ್ ಭಟ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದನು. ಆದ್ರೆ ಇದೀಗ ಸಿದ್ದಾಪುರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರೋದರಿಂದ ಕಮಲಾಕರ್ ಭಟ್‌ಗೆ ಜಾಮೀನು ಸಿಗೋದು ಅನುಮಾನ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಶಿವಮೊಗ್ಗ: ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ: ಮತ್ತೊಬ್ಬ ಪೇದೆಯ ಕರಾಳ ಮುಖ ಬಿಚ್ಚಿಟ್ಟ ಸಂದೇಶ

Read more Photos on
click me!

Recommended Stories