ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ತಿಡಗುಂದಿ ಶಾಖಾ ಕಾಲುವೆ ಯೋಜನೆಯಡಿ ನಿರ್ಮಾಣವಾದ ಏಷ್ಯಾದಲ್ಲಿಯೇ ಅತ್ಯಂತ ಉದ್ದವಾದ ಜಲಸೇತುವೆ
14.73 ಕಿಮೀ ಉದ್ದ, ತಳಮಟ್ಟದಿಂದ 30 ಮೀ. ಎತ್ತರ, 208.26 ಕೋಟಿ ವೆಚ್ಚದಲ್ಲಿ ಜಲಸೇತುವೆ ನಿರ್ಮಾಣ
ಈ ಜಲ ಸೇತುವೆಯಿಂದ 29 ಗ್ರಾಮಗಳ 63,190 ಎಕರೆಗೆ ನೀರಾವರಿ ಸೌಲಭ್ಯ
ವಿಜಯಪುರ ತಾಲೂಕಿನ ಬುರಾಣಪುರ ಬಳಿ ಶಾಸೊತ್ರೕಕ್ತವಾಗಿ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ಶಾಸಕ ಪಾಟೀಲ
ಸಾಮಾಜಿಕ ಅಂತರ ಪಾಲನೆಗಾಗಿ ರಚಿಸಲಾಗಿದ್ದ ನಿರ್ದಿಷ್ಟ ಬಾಕ್ಸ್‌ನಲ್ಲಿ ನಿಂತ ರೈತರು
ತಮ್ಮ ಭಾಗಕ್ಕೆ ಕೃಷ್ಣೆ ಹರಿದು ಬರುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಅನೇಕ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಈ ಅಮೂಲ್ಯ ಕ್ಷಣವನ್ನು ವೀಕ್ಷಿಸಿದರು
ಶಾಸಕ ಎಂ.ಬಿ. ಪಾಟೀಲ ಬಾಗಿನ ಅರ್ಪಿಸುತ್ತಿದ್ದಂತೆಯೇ ಕೃಷ್ಣಾ ಮಾತೆಗೆ ಜಯವಾಗಲಿ ಎಂಬ ಉದ್ಘೋಷ ಜೋರಾಗಿ ಮೊಳಗಿತು
ಈ ಯೋಜನೆಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೂ ದೊಡ್ಡ ವರದಾನ
ತಿಡಗುಂದಿ ಯೋಜನೆಯ 12 ಹಳ್ಳಿಗಳಿಗೆ ಈಗಾಗಲೇ ನೀರಾವರಿ ಸೌಲಭ್ಯ
ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಭಾಗಿ