ಕೊಡಗಿನ ವಿವಿಧೆಡೆ ಬೆಳಗಿನ ಜಾವ ಭಾರಿ ಮಳೆ, ಇಲ್ಲಿವೆ ಫೋಟೋಸ್

First Published | Apr 25, 2020, 10:49 AM IST

ಕೊಡಗು ಜಿಲ್ಲಾದ್ಯಂತ ಶುಕ್ರವಾರ ಮುಂಜಾನೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಡಿಲಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಜನರು ಪರದಾಡುವಂತಾಯಿತು. ಇಲ್ಲಿವೆ ಫೋಟೋಸ್

ಮುಂಜಾನೆಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಬಳಿಕ ಹನಿಹನಿಯಾಗಿ ಸುರಿಯಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕುಶಾಲನಗರ, ಭಾಗಮಂಡಲ, ಸೋಮವಾರಪೇಟೆ, ಗೋಣಿಕೊಪ್ಪ, ಕರಿಕೆ, ಸಿದ್ದಾಪುರ, ಮೂರ್ನಾಡು, ನಾಪೋಕ್ಲು, ಸುಂಟಿಕೊಪ್ಪ, ಚೆಟ್ಟಳ್ಳಿ, ಕಡಗದಾಳು, ಆಲೂರು ಸಿದ್ದಾಪುರ, ಅಮ್ಮತ್ತಿಯಲ್ಲಿ ಉತ್ತಮ ಮಳೆಯಾಯಿತು.
undefined
ಕೋಟೆಬೆಟ್ಟಹಾಗೂ ಪುಷ್ಪಗಿರಿ ತಪ್ಪಲಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬೆಟ್ಟದಳ್ಳಿ, ಸೂರ್ಲಬ್ಬಿ, ಗರ್ವಾಲೆ, ಕಿಕ್ಕರಳ್ಳಿ, ಮಂಕ್ಯಾ, ಹಮ್ಮಿಯಾಲ, ಮುಟ್ಲು ಕುಂಬಾರಗಡಿಗೆ, ಶೀರಂಗಳ್ಳಿ, ಶಾಂತಳ್ಳಿ, ಕುಡಿಗಾಣ, ಹರಗ, ಕೊತ್ನಳ್ಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ.
undefined

Latest Videos


ಗುರುವಾರ ರಾತ್ರಿ 11 ಗಂಟೆಯಿಂದ ಮುಂಜಾನೆ ಎರಡು ಗಂಟೆಯವರೆಗೆ ಹಾಗೂ ಮುಂಜಾನೆ 5ರಿಂದ ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಮಳೆಯಾಗಿದ್ದು ನಂತರ ಮೋಡ ಕವಿದ ವಾತಾವರಣವಿತ್ತು.
undefined
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನಗಳು ಮಾತ್ರ ನಿಗದಿತ ಅವಧಿ​ಯಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ನಡುವೆ ನಿರಂತರ ಸುರಿಯುತ್ತಿರುವ ಮಳೆಯಿಂದ ಜನತೆ ಅಗತ್ಯ ವಸ್ತುಗಳನ್ನು ಖರೀದಿಸಲು ತೊಂದರೆ ಅನುಭವಿಸಿದರು.
undefined
ಕುಶಾಲನಗರದಲ್ಲಿ ಗುರುವಾರ ತಡರಾತ್ರಿ ಸುರಿದ ಮಳೆಗೆ ಕೆಲವೆಡೆ ಅಲ್ಪ ಸ್ವಲ್ಪ ಹಾನಿ ಉಂಟಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೆಲವು ಮನೆಗಳು ಕುಸಿದಿವೆ ಮತ್ತು ಕುಶಾಲನಗರ ಗಡಿಭಾಗದಲ್ಲಿ ನಿರ್ಮಿಸಲಾಗಿದ್ದ ಕೇಂದ್ರದ ಶೆಡ್‌ ನೆಲಕಚ್ಚಿದೆ ಕರ್ತವ್ಯನಿರತ ಸಿಬ್ಬಂದಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.
undefined
ಕುಶಾಲನಗರ ಸಮೀಪದ ಸುಂದರ ನಗರದಲ್ಲಿ ಪುಷ್ಪಮ್ಮ ಎಂಬವರಿಗೆ ಸೇರಿದ ಮನೆ ಕಟ್ಟಡ ಮಳೆಯಿಂದ ಕುಸಿದಿದ್ದು ಯಾವುದೇ ಅಪಾಯ ಉಂಟಾಗಿಲ್ಲ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿ ​ಜ್ಯೋತಿ ಅವರು ಭೇಟಿ ನೀಡಿದರು.
undefined
ಮಳೆ ಬಿದ್ದ ಬೆನ್ನಲ್ಲೇ ಈ ಭಾಗದ ರೈತಾಪಿವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡುಬಂದಿದೆ.
undefined
click me!