ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ

First Published | Apr 24, 2020, 11:40 AM IST

ಬಾಗಲಕೋಟೆ(ಏ.24): ಮಹಾಮಾರಿ ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಗ್ರಾಮಸ್ಥರು ಶ್ರೀ ಲಕ್ಷ್ಮೀ ದೇವಿಗೆ ಮೊರೆ ಹೋದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಿರಿಯ ಮುಖಂಡರು 5 ವಾರಗಳ ಹರಕೆ ಹೊತ್ತಿದ್ದು, ಹಿರಿಯರಿಂದ ದೀರ್ಘದಂಡ ನಮಸ್ಕಾರ ಸೇವೆ ಮಾಡುತ್ತಿದ್ದಾರೆ. ಇಬ್ಬರೂ ಹಿರಿಯರು ಒಂದೂವರೆ ಕಿಲೋಮೀಟರ್ ದೀರ್ಘ ದಂಡ ಸೇವೆ ಸಲ್ಲಿಸಿದ್ದಾರೆ. 

ನಮ್ಮೂರಿಗೆ ಕೊರೋನಾ ಬರಬಾರದೆಂದು ಗ್ರಾಮದ ಇಬ್ಬರು ಹಿರಿಯರಿಂದ ದೇವರಿಗೆ ಮೊರೆ
ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇಗುಲದವರೆಗೆ ದೀರ್ಘ ದಂಡ ನಮಸ್ಕಾರ
Tap to resize

ಶ್ರೀಕಾಂತ್ ಬಡಿಗೇರ ಮತ್ತು ರೇವಣ್ಣ ಮಾದರ ಎಂಬುವರಿಂದ ಗ್ರಾಮ ದೇವತೆಗೆ ದೀರ್ಘ ದಂಡ ನಮಸ್ಕಾರ
ಪ್ರಧಾನಿ ಮೋದಿ ಘೋಷಿಸಿದ ಲಾಕ್‌ಡೌನ್ ಬೆಂಬಲಿಸಿ ಎಂದು ಜನರಿಗೆ ಮನವಿ

Latest Videos

click me!