ಮಾಂಸ ಮಾರಾಟವಿಲ್ಲ: ಮೀನಿಗೆ ಮುಗಿಬಿದ್ದ ಜನ, ಇಲ್ಲಿವೆ ಫೋಟೋಸ್

First Published | Apr 23, 2020, 2:28 PM IST

ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನ ಮೀನು ಕೃಷಿಕ ಮಂದ್ರಿರ ತೇಜಸ್‌ ನಾಣಯ್ಯ ತಮ್ಮ ಎರಡು ಕೆರೆಯಲ್ಲಿ ಮೀನು ಹಿಡಿದು ವ್ಯಾಪಾರ ಮಾಡಿ ಎರಡೇ ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದಾರೆ. ಮಾಂಸ ಮಾರಾಟ ನಡೆಯದಿರುವುದರಿಂದ ಮೀನು ಕೃಷಿಕರು ಬಂಪರ್ ಆದಾಯ ಗಳಿಸುತ್ತಿದ್ದಾರೆ. ಇಲ್ಲಿವೆ ಫೋಟೋಸ್

ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನ ಮೀನು ಕೃಷಿಕ ಮಂದ್ರಿರ ತೇಜಸ್‌ ನಾಣಯ್ಯ ತಮ್ಮ ಎರಡು ಕೆರೆಯಲ್ಲಿ ಮೀನು ಹಿಡಿದು ವ್ಯಾಪಾರ ಮಾಡಿ ಎರಡೇ ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದಾರೆ.
ಈ ಹಿಂದೆ ಒಂದು ಬಾರಿ ಮೀನು ಹಿಡಿದರೆ 500-800 ಕೆ.ಜಿ. ಮಾತ್ರ ಮಾರಾಟವಾಗುತ್ತಿತ್ತು. ಆದರೆ ಈಗ ಸಮುದ್ರ ಮೀನು ಹಾಗೂ ಮಾಂಸ ದೊರಕದೆ ಇರುವುದರಿಂದ ಹೆಚ್ಚಾಗಿ ಮೀನು ಮಾರಾಟವಾಗಿದೆ. ಇತ್ತೀಚೆಗೆ ಬೆಳಗ್ಗೆ 6.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ 2,130 ಕೆ.ಜಿ. ಮೀನು ಮಾರಾಟವಾಗಿದೆ. ಮತ್ತೊಂದು ದಿನ 1,220 ಕೆ.ಜಿ. ಮೀನು ಮಾರಾಟವಾಗಿದೆ.
Tap to resize

ಒಂದು ಕೆ.ಜಿ. ಮೀನಿಗೆ 200 ರು. ರಂತೆ ಮಾರಾಟ ಮಾಡಿದ್ದು, ಎರಡು ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದೇನೆ. ಈ ಬಾರಿ ಮೀನು ಕೃಷಿ ಲಾಭದಾಯಕವಾಗಿದೆ. ಇನ್ನೂ ಕೆರೆಯಲ್ಲಿ 3 ಸಾವಿರ ಕೆ.ಜಿ.ಯಷ್ಟುಮೀನುಗಳಿವೆ ಎನ್ನುತ್ತಾರೆ ಮೀನು ಕೃಷಿಕ ತೇಜಸ್‌ ನಾಣಯ್ಯ.
ಜಿಲ್ಲಾಡಳಿತದಿಂದ ಸ್ಥಳೀಯ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮೀನು ಕೃಷಿಕರು ತಮ್ಮ ಕೆರೆಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದಾರೆ.
ಕೊಡಗು ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ಕೆರೆಗಳಿವೆ. ಕೆರೆಗಳಲ್ಲಿ ಕಾಟ್ಲಾ ಮತ್ತಿತರ ಮೀನುಗಳನ್ನು ಬೆಳೆಸುತ್ತಾರೆ. ಮೀನು ಕೃಷಿಗೆ ನಿರ್ವಹಣೆ ವೆಚ್ಚವೂ ತೀರಾ ಕಡಿಮೆ. ಲಾಕ್‌ಡೌನ್‌ ಆದ ಪರಿಣಾಮ ಜಿಲ್ಲೆಯಲ್ಲಿ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈಗ ವಾರದಲ್ಲಿ ಮೂರು ದಿನ ಮೀನು ಮಾರಾಟಕ್ಕೆ ಅವಕಾಶ ನೀಡಿದೆ.
ಮಧ್ಯವರ್ತಿಗಳು ಈ ಹಿಂದೆ ಒಂದು ಕೆ.ಜಿ. ಮೀನಿಗೆ 80 ರು.ಗೆ ಕೃಷಿಕರಿಂದ ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಸಮುದ್ರ ಮೀನು ಇಲ್ಲದ ಕಾರಣ ಕೆರೆ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಮಧ್ಯವರ್ತಿಗಳು 1 ಕೆ.ಜಿ. ಮೀನಿಗೆ 130 ರು. ತೆಗೆದುಕೊಂಡು ಹೋಗುತ್ತಿದ್ದಾರೆ. ಅದಲ್ಲದೆ ಮೀನು ಕೃಷಿಕರು ತಮ್ಮ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ.

Latest Videos

click me!