ಬಿರು ಬೇಸಿಗೆಯಲ್ಲೇ ಕೆರೆಗೆ ನೀರು ತುಂಬಿಸಿ ಭಗೀರಥನಾದ ಶಾಸಕ ನಡಹಳ್ಳಿ..!

First Published May 10, 2020, 11:53 AM IST

ವಿಜಯಪುರ(ಮೇ.10): ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ವಿಶೇಷ ಕಾಳಜಿ ವಹಿಸಿ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿದ್ದಾರೆ. ಈ ಮೂಲಕ ಮಲಗಲದಿನ್ನಿ ಕೆರೆಗೆ ನೀರು ತುಂಬಿಸುವ ಬಹುವರ್ಷಗಳ ಬೇಡಿಕೆಯಾಗಿದ್ದ ಕನಸನ್ನು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ನನಸಾಗಿಸಿದ್ದಾರೆ.

ಪ್ರಸಕ್ತ ವರ್ಷದ ಬಿರು ಬೇಸಿಗೆಯಲ್ಲಿಯೇ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿದ ಶಾಸಕ ನಡಹಳ್ಳಿ
undefined
ತಾಲೂಕಿನ ಸೋಮನಾಳ, ನಾಗರಬೆಟ್ಟ ಹಾಗೂ ಹಿರೆಮೂರಾಳ 3 ಪಂಚಾಯತಿಗಳ ವ್ಯಾಪ್ತಿಗೆ ಬರುವ ಬೂದಿಹಾಳ, ಮಾನಬಾವಿ, ಮಲಗಲದಿನ್ನಿ, ನಾಗರಬೆಟ್ಟ, ಚವನಬಾವಿ, ಹಿರೆಮೂರಾಳ ಸೇರಿದಂತೆ ಜಂಗಮುರಾಳ ಒಟ್ಟು 7 ಗ್ರಾಮಗಳು ಕೆರೆ ಅವಲಂಬಿಸಿವೆ
undefined
ಸುಮಾರು 56 ಎಕರೆ ವಿಸ್ತಿರ್ಣವಾದ ಕೆರೆಗೆ ನೀರು ಬಂದಿದ್ದು, ರೈತರ ಬಾಳನ್ನು ಮತ್ತಷ್ಟು ಹಸಿರಾಗಿಸಿದೆ
undefined
ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಮಾಡದ ಅಭಿವೃದ್ಧಿಯನ್ನು ಕೇವಲ ಮೂರೇ ವರ್ಷದಲ್ಲಿ ಮಾಡಿ ತೊರಿಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ
undefined
ಸುಮಾರು 70 ಲಕ್ಷ ವಿಶೇಷ ಅನುದಾನದಲ್ಲಿ ಕೆರೆ ಮರು ನಿರ್ಮಾಣಗೊಳಿಸಿದ ಮಲಗಲದಿನ್ನಿ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ
undefined
click me!