ಕೋವಿಡ್19 ಘಟಕದಲ್ಲಿರುವ ಕಾರ್ಕಳದ ವೈದ್ಯನಿಗೆ ಅಮೆರಿಕದ ಅತ್ಯುನ್ನತ ಗೌರವ..!

First Published May 10, 2020, 10:32 AM IST

ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಅಮೇರಿಕಾದಲ್ಲಿನ ಟಾಪ್ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಪೀಡಿತ ರೋಗಿ ಆಸ್ಪತ್ರೆ ಗಳ ತುರ್ತು ಚಿಕಿತ್ಸಾ ಘಟಕ ದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್ ಅಡಿಗ ಅವರಿಗೆ ಅಮೇರಿಕಾ ಸರ್ಕಾರ ಅಲ್ಲಿನ ಅತ್ಯುನ್ನತ ಗೌರವದ ಸಂಭ್ರಮವನ್ನು ನೀಡಿದೆ. ಇಲ್ಲಿವೆ ಫೋಟೋಸ್

ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಅಮೇರಿಕಾದಲ್ಲಿನ ಟಾಪ್ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಪೀಡಿತ ರೋಗಿ ಆಸ್ಪತ್ರೆ ಗಳ ತುರ್ತು ಚಿಕಿತ್ಸಾ ಘಟಕ ದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್ ಅಡಿಗ ಅವರಿಗೆ ಅಮೇರಿಕಾ ಸರ್ಕಾರ ಅಲ್ಲಿನ ಅತ್ಯುನ್ನತ ಗೌರವದ ಸಂಭ್ರಮವನ್ನು ನೀಡಿದೆ.
undefined
ಇತ್ತೀಚೆಗಷ್ಟೇ ಮೈಸೂರಿನ ‌ವೈದ್ಯರೊಬ್ಬರಿಗೆ ಇದೇ ತರದ ಗೌರವವನ್ನು ಅಮೇರಿಕಾದ ಸರ್ಕಾರ ಸಲ್ಲಿಸಿತ್ತು.
undefined
ಕಾರ್ಕಳದಲ್ಲಿ ‌ಹುಟ್ಟಿ ಭಾರತದಲ್ಲೇ ವೈದ್ಯಕೀಯ ಶಿಕ್ಷಣ ಪಡೆದು ತಜ್ಞ ವೈದ್ಯ ರಾಗಿ‌ ಕಳೆದ ಎಂಟು ವರ್ಷಗಳ‌ ಹಿಂದೆಅಮೇರಿಕಾಕ್ಕೆ ತೆರಳಿ ನ್ಯೂಯಾರ್ಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಅಮೇರಿಕಾದ ನ್ಯೂಜೆರ್ಸಿಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 36ವರ್ಷದ ಯುವ ವೈದ್ಯ ರಾಗಿದ್ದಾರೆ.
undefined
ವೈದ್ಯ ಅವಿನಾಶ್ ಅಡಿಗ ಅವರ ಹೆತ್ತವರು ಈಗಲೂ ‌ಕಾರ್ಕಳದಲ್ಲಿ ವಾಸ್ತವವಿದ್ದು ಅಮೇರಿಕಾದಲ್ಲಿ ‌ಮಗನ ಸೇವೆಗೆ ಹಾಗೂ ಸಂದ ಗೌರವಕ್ಕೆ ತೀವ್ರ ಹರ್ಷ ವ್ಯಕ್ತ ಪಡಿಸಿದ್ದಾರೆ.
undefined
ಕೊರೋನಾ ವೈರಸ್ ನಿಂದ ತತ್ತರಿಸಿರುವ ಅಮೇರಿಕಾದಲ್ಲಿ ಕೊರೋನಾ ಪೀಡಿತರ ಸೇವೆಯಲ್ಲಿ ‌ಸದ್ಯ‌ ನಿರತರಾಗಿರುವ ಅವರು ಯಾವುದೇ ಅಂಜಿಕೆ ಭಯ ವಿಲ್ಲದೆ‌ ರೋಗಿಗಳಿಗೆ ನೀಡಿದ ಸೇವೆಗಾಗಿ ಈ ಗೌರವ ಪ್ರಾಪ್ತವಾಗಿದೆ.
undefined
ಎಂ ಗೋವಿಂದ ಅಡಿಗ ಹಾಗು ಶಕುಂತಲಾ ದಂಪತಿಯ ಮೊದಲ ಮಗನಾದ ಅವಿನಾಶ್ ಅಡಿಗ ಇತ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಕಳದ ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ‌ಮುಗಿಸಿ ನಿಟ್ಟೆ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರು
undefined
ಬಳ್ಳಾರಿ ವಿ.ಎಮ್ .ಐ.ಎಸ್ ಸರಕಾರಿ ಮೆಡಿಕಲ್ ‌ಕಾಲೇಜ್ ನಲ್ಲಿ ‌ಎಂ.ಬಿ.ಬಿ.ಎಸ್ ವೈದ್ಯಕೀಯ ಶಿಕ್ಷಣ ಪಡೆದು ಬಳಿಕ ರಾಜಸ್ತಾನದ ಉದಯ ಪುರದ ರವೀಂದ್ರ ನಾಥ ಟಾಗೋರ್‌ ‌ಮೆಮೋರಿಯಲ್ ಕಾಲೇಜಿನಲ್ಲಿ ವೈದ್ಯಕೀಯ ಎಂಡಿ ಪೂರ್ಣ ಗೊಳಿಸಿ ಬಳಿಕ ಅಮೇರಿಕಾದ ಟೆಕ್ಸ್ ಟೆಕ್ ಯುನಿವರ್ಸಿಟಿ ‌ಅರೋಗ್ಯ ವಿಜ್ಞಾನ ‌ಕೇಂದ್ರದಲ್ಲಿ ಎಂಡಿ ಇಂಟರ್ ನ್ಯಾಶನಲ್ ‌ಮೆಡಿಸಿನ್ ಅದ್ಯಯನ ಮಾಡಿ ನ್ಯೂಯಾರ್ಕ್ ನ ಲಾಂಗ್ ಗೋನ್ ಅರೋಗ್ಯ ಕೇಂದ್ರದಲ್ಲಿ ನೆಪ್ರೋಲಾಜಿ (ಮೂತ್ರ ಪಿಂಡ ಶಾಸ್ತ್ರ) ಫೆಲೋಶಿಪ್ ಮಾಡಿರುತ್ತಾರೆ.
undefined
ಇದೀಗ ನ್ಯೂಜೆರ್ಸಿ ಆರೋಗ್ಯ ಕೇಂದ್ರದಲ್ಲಿ ತುರ್ತು ವಿಮರ್ಶಾತ್ಮಕ ಆರೈಕೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
undefined
ಅಮೇರಿಕಾದಲ್ಲಿ ಕೊರೋನಾ ಸಂದರ್ಭದಲ್ಲಿ ಮೂರು‌ ಆಸ್ಪತ್ರೆಗಳಲ್ಲಿ ಅವಿರತ ಸೇವೆ ನೀಡಿದ್ದು ಮನೆಯಲ್ಲಿ 1 ವರ್ಷದ ಮಗು ಇದ್ದರೂ ಕೂಡ ತನ್ನ ಕರ್ತವ್ಯ ಮರೆಯದೆ ಸೇವೆ ಒತ್ತು ನೀಡಿದ್ದರು.
undefined
ಈವರೆಗೆ ಅಮೇರಿಕಾ ಟಾಪ್ 9 ಆಸ್ಪತ್ರೆಯಲ್ಲಿ ಸುಮಾರು 1500 ಕೊರೋನಾ ಸೋಂಕಿತರಿಗೆ ಚಿಕಿತ್ಸೆ‌ ನೀಡಿದ್ದು ಈ ಹಿನ್ನಲೆ ಡ್ರೈವ್ ಆಫ್ ಆನರ್ ನೀಡಿ ವೈದ್ಯ ಅವಿನಾಶ್ ಅಡಿಗ ಅವರ ಮನೆಯ ಮುಂದೆ ಅಮೇರಿಕನ್ನರು ತಮ್ಮ ತಮ್ಮ ವಾಹನ ಮೂಲಕ ಸಾಗಿ ಕೃತಜ್ಞತೆಯ ‌ಸಲ್ಲಿಸಿದ್ದಾರೆ.
undefined
click me!