ಬಾಗಲಕೋಟೆ(ಮಾ.14): ರಾಜ್ಯಾದ್ಯಂತ ಕರ್ನಾಟಕ ಬಂದ್‌ನ ಬಿಸಿ ತಟ್ಟಿದೆ. ಆದರೆ, ಮುಳುಗಡೆ ನಗರಿ ಬಾಗಲಕೋಟೆಗೆ ಮಾತ್ರ ಇದರ ಪರಿಣಾಮ ಬೀರಿಲ್ಲ. ಹೌದು, ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿದೆ. ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರ ಸಂತೆ ಎಂದಿನಂತೆ ನಡೆದಿದೆ. ಸಂತೆಯಲ್ಲಿ ನೂರಾರು ಜನರು ಜಮಾಯಿಸಿದ್ದಾರೆ.