Published : Mar 14, 2020, 12:38 PM ISTUpdated : Mar 14, 2020, 12:43 PM IST
ಕಲಬುರಗಿ(ಮಾ.14): ಕೊರೋನಾ ಸೋಂಕಿನಿಂದ ವೃದ್ಧ ಮೃತಪಟ್ಟ ಬಳಿಕ ಕಲಬುರಗಿ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೆಲಸ ಇದ್ದರೆ ಮಾತ್ರ ಕಲಬುರಗಿಗೆ ಬನ್ನಿ ಇಲ್ಲಾಂದ್ರೆ ಬರಬೇಡಿ ಎಂದು ಸ್ವತಃ ಜಿಲ್ಲಾಧಿಕಾರಿ ಶರತ್ ಬಿ ಅವರೇ ಹೇಳಿದ್ದಾರೆ. ಹೀಗಾಗಿ ಕಲಬುರಗಿಗೆ ಹೋಗಲು ಜನ ಹಿಂದೆ ಮುಂದು ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.